ಓಂ ಶ್ರೀ ಗುರು ಬಸವಲಿಂಗಾಯ ನಮಃ

Sri. Hukkerimath Shivabasaveshwar Higher Primary Schoool was established in 1974 and it is managed by the Pvt. Aided. It is located in Urban area. It is located in HAVERI block of HAVERI district of Karnataka. The school consists of Grades from 1 to 7. The school is Co-educational and it have an attached pre-primary section. The school is N/A in nature and is not using school building as a shift-school. Kannada is the medium of instructions in this school. This school is approachable by all weather road. In this school academic session starts in April.
The school has Private building. It has got 16 classrooms for instructional purposes. All the classrooms are in good condition. It has 2 other rooms for non-teaching activities. The school has a separate room for Head master/Teacher. The school has Pucca boundary wall. The school has have electric connection. The source of Drinking Water in the school is Tap Water and it is functional. The school has 1 boys toilet and it is functional. and 1 girls toilet and it is functional. The school has a playground. The school has a library and has 285 books in its library. The school does not need ramp for disabled children to access classrooms. The school has 1 computers for teaching and learning purposes and all are functional. The school is not having a computer aided learning lab. The school is Provided and Prepared in School Premises providing mid-day meal.
ಶ್ರೀ ತಿವಲಿಂಗೇಶ್ವರ ವಿದ್ಯಾಪೀಠವು ಮಠಾಧ್ಯಕ್ಷರಾಗಿದ್ದ ಪರಮಪೂಜ್ಯ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಮಿಗಳವರ ಗೌರವ ಅಧ್ಯಕ್ಷತೆಯಲ್ಲಿ 1985 ರಲ್ಲಿ ಶ್ರೀಮಠದಲ್ಲಿ ಪ್ರಾರಂಭವಾಯಿತು. ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದ ಸಂಸ್ಥಾಪಕ ಚೇರ್ಮನ್ನರಾದ ಶ್ರೀ ಷಡಕ್ಷರಪ್ಪ ಸಿದ್ರಾಮಪ್ಪ ಮುಷ್ಠಿ ಇವರು 1985 ರಿಂದ 2011 ರ ವರೆಗೆ ಸುವ್ಯವಸ್ಥಿತವಾಗಿ ಆಡಳಿತ ನಡೆಸಿ, ಶಾಲಾ ಕಾಲೇಜುಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಿರುವುದಲ್ಲದೇ ಆರ್ಥಿಕವಾಗಿ ಸಬಲಗೊಳಿಸಿ ಭದ್ರ ಬುನಾದಿ ಹಾಕಿದರು. ನಂತರ ಶ್ರೀ ಪಿ.ಡಿ ಶಿರೂರ ಅವರು ಚೇರಮನ್ನರಾಗಿ ಅತ್ಯಂತ ಕ್ರಿಯಾಶೀಲತೆಯಿಂದ ಆಡಳಿತ ನಿರ್ವಹಣೆ ಮಾಡಿದ್ದಲ್ಲದೆ ಶಾಲಾ ಕಾಲೇಜುಗಳಿಗೆ ವೇಗವರ್ಧಕ ನೀಡಿ ಜಿಲ್ಲಾದ್ಯಂತ ಹೆಸರುವಾಸಿಯಾಗಲು ಅನೇಕ ವಿಧಾಯಕ ಕಾರ್ಯಕ್ರಮ ಕೈಗೊಂಡರು. 2015 ರಿಂದ ಚೇರಮನ್ನರಾದ ಶ್ರೀ ಶಿವಬಸಪ್ಪ ಎಸ್. ಮುಷ್ಠಿ ಅವರು ತಮ್ಮ ಸರಳತೆ ಹಾಗೂ ಸಜ್ಜನಿಕೆಯಿಂದ ಎಲ್ಲರ ಗೌರವಾದರಗಳಿಗೆ ಪಾತ್ರರಾಗಿ ಉತ್ತಮ ಆಡಳಿತ ನೀಡುತ್ತಾ ಬಂದಿರುವುದು ಅಭಿಮಾನದ ಸಂಗತಿ.
ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದ ಗೌರವಾಧ್ಯಕ್ಷರಾಗಿರುವ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀಮ.ನಿ.ಪ್ರ ಸದಾಶಿವ ಮಹಾಸ್ವಾಮಿಗಳು. ಹುಕ್ಕೇರಿ ಮಠದ ನಿರಂಜನ ಪೀಠವನ್ನು 23-5-2010 ರಂದು ಅಲಂಕರಿಸಿದ ನಂತರ ಶಿಕ್ಷಣ ಸಂಸ್ಥೆಗಳ ಸರ್ವತೋಮುಖ ಅಭಿವೃದ್ಧಿಗೆ ಗಮನಹರಿಸಿ, ಸುವ್ಯವಸ್ಥಿತ ರೀತಿಯಲ್ಲಿ ನಡೆಯುವಂತೆ ಹಾಗೂ ಗುಣಮಟ್ಟದ ಶಿಕ್ಷಣ ನೀಡುವಂತೆ ನೋಡಿಕೊಳ್ಳುತ್ತಿದ್ದಾರೆ. ಪರಮಪೂಜ್ಯ ಶ್ರೀ ಮ.ನಿ.ಪ್ರ ಶಿವಲಿಂಗ ಮಹಾಸ್ವಾಮಿಗಳವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಾ, ಭಕ್ತರಿಂದ ಕಾಯಂ ಠೇವಣಿಗಳನ್ನ ಸಂಗ್ರಹಿಸಿಟ್ಟು ಅವುಗಳಿಂದ ಬಂದ ಬಡ್ಡಿಯ ಹಣದಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಾ, ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ, ನೋಟ್ ಪುಸ್ತಕ, ಲೇಖನ ಸಾಮಗ್ರಿಗಳನ್ನು ನೀಡುತ್ತಾ ಬಂದಿರುವದು ಅವರ ಶೈಕ್ಷಣಿಕ ಕಾಳಜಿಗೆ ಒಂದು ಉತ್ತಮ ಉದಾಹರಣೆ. ಶಾಲೆಯಲ್ಲಿ ಪಠ್ಯ ಚಟುವಟಿಕೆಗಳ ಜೊತೆ, ಪಠ್ಯ ಪೂರಕ ಚಟುವಟಿಕೆಗಳಾದ ಭಾಷಣ ಸ್ಪರ್ಧೆ, ಚರ್ಚಾಕೂಟ, ರಸಪ್ರಶ್ನೆ, ಕಾವ್ಯಗಾಯನ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಉತ್ತಮ ವಾಚನಾಲಯ ಹಾಗೂ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯವಿದೆ. ಇತಿಹಾಸ ಸಂಘ, ಇಕೋ ಕ್ಲಬ್, ವಿಜ್ಞಾನ ಸಂಘಗಳ ಮೂಲಕ ವಿದ್ಯಾರ್ಥಿಗಳ ಸವಾರ್ಂಗೀಣ ಉನ್ನತಿಗೆ, ವಿಕಾಸಕ್ಕೆ ಅನುಕೂಲ ಕಲ್ಪಿಸಲಾಗಿದೆ.
ಹುಕ್ಕೇರಿಮಠದ ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳು 51 ವರ್ಷ ಸಾರ್ಥಕ ಸೇವೆ ಪೂರೈಸಿ, ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ, ಮಾರ್ಗದರ್ಶನ ಮಾಡಿ, ಶಿಸ್ತು ಹಾಗೂ ನೈತಿಕ ಮೌಲ್ಯಗಳನ್ನು ಕಲಿಸಿ, ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ಎರಡು ಶಾಲೆಗಳು ಬೆಳೆದು ಬಂದು ಐದು ದಶಕಗಳನ್ನು ಯಶಸ್ವಿಯಾಗಿ ಪೂರೈಸಲು, ಪರಮ ತಪಸ್ವಿಗಳಾದ ಪರಮಪೂಜ್ಯ ಶ್ರೀ ಮ.ನಿ.ಪ್ರ ಶಿವಬಸವ ಮಹಾಶಿವಯೋಗಿಗಳವರ ಸಂಸ್ಥಾಪಕರಾದ ಪರಮಪೂಜ್ಯ ಶ್ರೀ ಮ.ನಿ.ಪ್ರ ಶಿವಲಿಂಗ ಮಹಾಶಿವಯೋಗಿಗಳವರ ಅವರ ಆಶೀರ್ವಾದ ಹಾಗೂ ಪ್ರಸ್ತುತ ಮತಾಧ್ಯಕ್ಷರಾದ ಶ್ರೀ ಮ.ನಿ.ಪ್ರ ಸದಾಶಿವ ಮಹಾಸ್ವಾಮಿಗಳವರ ಕರುಣಾಪೂರಿತ ಅಂತಃಕರಣದ ಆಶೀರ್ವಾದ, ಮಾರ್ಗದರ್ಶನ, ಆಡಳಿತ ಮಂಡಳಿಯವರ ದೂರದೃಷ್ಟಿ, ತ್ಯಾಗ ಮತ್ತು ಸೇವೆ, ಪಾಲಕರ ಸಹಾಯ, ಸಹಕಾರ, ನಿಷ್ಠಾವಂತ ಶಿಕ್ಷಕರ ಜ್ಞಾನದಾಸೋಹ ಮತ್ತು ವಿದ್ಯಾರ್ಥಿಗಳ ಪರಿಶ್ರಮದ ಫಲ ಎಂದು ಹೆಮ್ಮೆಯಿಂದ ಹೇಳ ಬಯಸುತ್ತೇನೆ.
ಪರಮಪೂಜ್ಯ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳಿಗೆ 75 ವರ್ಷಗಳಾದ ಸಂದರ್ಭದಲ್ಲಿ, ಅವರ ವಜ್ರ ಮಹೋತ್ಸವ ಸಮಾರಂಭವನ್ನು 1992ರ ಮಾರ್ಚ್ ತಿಂಗಳಲ್ಲಿ ಸಂಭ್ರಮದಿಂದ
ಆಚರಿಸಲಾಯಿತು. ಅದರ ಸವಿನೆನೆಗಾಗಿ, ಮಹಿಳೆಯರಿಗಾಗಿ ಮಹಿಳಾ ಕಾಲೇಜನ್ನು ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದಲ್ಲಿ ಪ್ರಾರಂಭಿಸಲು ಪೂಜ್ಯರು ಸಲಹೆ ನೀಡಿದರು. ಶಿಕ್ಷಣ, ""ಹೆಣ್ಣು ಮಕ್ಕಳನ್ನು ಸಂಸ್ಕಾರಯುತವಾಗಿ, ವಿಚಾರವಾದಿಗಳಾಗಿ ಬೆಳೆಯಲು ಸಹಾಯ ಮಾಡುತ್ತದೆ" ಹಾಗು ಕಲಿತ ಹೆಣ್ಣು ಕುಲಕ್ಕೆ ಗೌರವ, ಹೆಣ್ಣೆಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನುಡಿಯಂತೆ, ಹಾವೇರಿ ನಗರದಲ್ಲಿ ಒಂದು ಹೆಣ್ಣು ಮಕ್ಕಳ ಕಾಲೇಜನ್ನು ಪ್ರಾರಂಭಿಸಿದರೆ ಅನುಕೂಲವಾಗಬಹುದೆಂದು ಉದ್ದೇಶದಿಂದ, ಹಾವೇರಿ ನಗರ ಹಾಗೂ ಸುತ್ತಮುತ್ತಲ ಗ್ರಾಮದ ಮಹಿಳೆಯರು ಪದವಿ ಶಿಕ್ಷಣ ಪಡೆಯಲು, ಹಾವೇರಿಯಿಂದ 3 ಕಿ.ಮಿ. ದೂರವಿರುವ ಜಿ.ಎಚ್ ಕಾಲೇಜಿಗೆ ಹೋಗಬೇಕಾಗುತ್ತಿತ್ತು. ಇದರಿಂದ ಪಿಯುಸಿ ಆದ ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದರು. ಇದನ್ನು ಮನಗಂಡ ಮಹಾಸ್ವಾಮಿಗಳು ವಜ್ರ ಮಹೋತ್ಸವದಲ್ಲಿ ಬೆಳ್ಳಿ ತುಲಾಭಾರದಿಂದ ಬಂದ ಹಣವನ್ನು ಆಶೀರ್ವದಿಸಿದ ಪರಿಣಾಮವಾಗಿ,
ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯವನ್ನು 1992 ರಿಂದ ಶ್ರೀ ಹುಕ್ಕೇರಿಮಠದ ಆವರಣದಲ್ಲಿ ಪ್ರಾರಂಭಿಸಲಾಯಿತು.
1992 ರಲ್ಲಿ ಕೇವಲ 48 ವಿದ್ಯಾರ್ಥಿನಿಯರಿಂದ ಪ್ರಾರಂಭವಾಗಿ, 2004-05 ರಲ್ಲಿ 450 ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದರು. ಹಾವೇರಿ ನಗರದಲ್ಲಿಯೇ ಸರ್ಕಾರಿ ಮಹಿಳಾ ಕಾಲೇಜು ಪ್ರಾರಂಭವಾಗಿದ್ದರಿಂದ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆಯಾಗಿ, ಈಗ 143 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ಹಲವಾರು ಬ್ಯಾಂಕುಗಳನ್ನು ಪಡೆದು ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ. ವಾಣಿಜ್ಯ ಶಿಕ್ಷಣದ ಅವಶ್ಯಕತೆ ವಿದ್ಯಾರ್ಥಿನಿಯರಿಗೆ ಇರುವುದನ್ನರಿತು, 2014-15ನೇ ಸಾಲಿನಲ್ಲಿ ಬಿ.ಕಾಂ. ತರಗತಿಗಳನ್ನು ಪ್ರಾರಂಭಿಸಲಾಯಿತು. ಈಗ ಬಿಕಾಂ ವಿಭಾಗದಲ್ಲಿ 75 ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ. 1996-97 ನೇ ಸಾಲಿನಲ್ಲಿ ಬಾಲಕಿಯರ ಪದವಿಪೂರ್ವ ಕಾಲೇಜನ್ನು ಪ್ರಾರಂಭಿಸಲಾಯಿತು. ಅಲ್ಲಿ ಈಗ 85 ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಶ್ರೀ ರಾಚೋಟೇಶ್ವರ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯ, ಇಂದಿನ ದಿನಮಾನದಲ್ಲಿ ವಿಜ್ಞಾನ ಶಿಕ್ಷಣದ ನಂತರದ ಸ್ಥಾನ ವಾಣಿಜ್ಯ ಶಿಕ್ಷಣಕ್ಕಿದೆ ಎಂದರೆ ತಪ್ಪಾಗಲಾರದು ಇದನ್ನರಿತ ಆಡಳಿತ ಮಂಡಳಿಯವರು 2014 ರಲ್ಲಿ ಶ್ರೀ ರಾಚೋಟೇಶ್ವರ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯವನ್ನು ಪ್ರಾರಂಭಿಸಿದರು. ಈಗ ಅಲ್ಲಿ 94 ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ.
ಶ್ರೀ ಶಿವಲಿಂಗೇಶ್ವರ ಡಿ.ಇಡಿ ಕಾಲೇಜು ಉತ್ತಮ ಶಿಕ್ಷಕರನ್ನು ತಯಾರು ಮಾಡಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ, ಶ್ರೀ ಶಿವಲಿಂಗೇಶ್ವರ ಶಿಕ್ಷಕರ ತರಬೇತಿ ಮಹಾವಿದ್ಯಾಲಯವನ್ನು 2005 ರಲ್ಲಿ ಪ್ರಾರಂಭಿಸಿದರು. 10 ವರ್ಷಗಳ ವರೆಗೆ ಯಶಸ್ವಿಯಾಗಿ ನಡೆದು, ಸರ್ಕಾರದಿಂದ ಶಿಕ್ಷಕರ ನೇಮಕಾತಿ ಆಗದೇ ಇರುವುದು ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಬಿ.ಇಡಿ. ತರಬೇತಿ ಪಡೆದವರನ್ನು ನೇಮಕ ಮಾಡಿಕೊಳ್ಳುವುದು ಮುಂತಾದ ಕಾರಣಗಳಿಂದ ಕಾಲೇಜಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯದೇ ಇದ್ದುದರಿಂದ, ಕಾಲೇಜನ್ನು 2015 ರಲ್ಲಿ ಮುಚ್ಚಬೇಕಾಯಿತು.
Lorem ipsum dolor sit amet, consectetur adipisicing elit. Reiciendis voluptate modi sunt placeat in vel illo dolorem, atque maxime voluptates optio fugit iure cum ipsa quo quaerat! Veritatis, modi. Laudantium provident deleniti earum voluptas delectus, labore dolor dolorem amet expedita.