ಓಂ ಶ್ರೀ ಗುರು ಬಸವಲಿಂಗಾಯ ನಮಃ

ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠ (ರಿ)
ಹುಕ್ಕೇರಿಮಠ ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹುಕ್ಕೇರಿಮಠ ಶಿವಬಸವೇಶ್ವರ ಪ್ರೌಢ ಶಾಲೆಗಳು ಸಾಗಿಬಂದ
'ಸುವರ್ಣ ಪಥ"
ಶ್ರೀ ಬಿ. ಬಸವರಾಜ
ನಿವೃತ್ತ ಮುಖ್ಯೋಪಾಧ್ಯಾಯರು,
ಹುಕ್ಕೇರಿಮಠ ಶಿವಬಸವೇಶ್ವರ ಪ್ರೌಢಶಾಲೆ, ಹಾವೇರಿ
ಕರ್ನಾಟಕದ ಮಧ್ಯವರ್ತಿ ಜಿಲ್ಲೆ ಹಾವೇರಿ, ದಾಸಶ್ರೇಷ್ಠ ಕನಕದಾಸರು, ತ್ರಿಪದಿಕವಿ ಸರ್ವಜ್ಞ, ಧರ್ಮ ಸಮನ್ವಯದ ಹರಿಕಾರ ಸಂತ ಶಿಶುನಾಳ ಶರೀಫರು ಮುಂತಾದ ಶರಣರ ನಾಡು ಪುಣ್ಯದ ಬೀಡು. ಹಾವೇರಿ ಜಿಲ್ಲೆಯಲ್ಲಿ ಕನ್ನಡ ಚಳುವಳಿಯ ಮುಂದಾಳು ಶ್ರೀ ವಿ.ಕೃ. ಗೋಕಾಕ, ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ ಎಂದ ಚಂಪಾ, ಆಡಳಿತ ಭಾಷೆಯಲ್ಲಿ ಕನ್ನಡದ ಕುರಿತು ಅಧಿಕಾರಯುತವಾಗಿ ಬರೆದ ಮಹಾದೇವ ಬಣಕಾರ, ಪತ್ರಿಕೋಧ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ ಪಾಪು, ಕನ್ನಡದ ಕಾದಂಬರಿಕಾರ ಗಳಗನಾಥರು, ಸ್ವಾತಂತ್ರ್ಯ ಹೋರಾಟದಲ್ಲಿ ದೇಶವೇ ಮೆಚ್ಚಿದ ಮೈಲಾರ ಮಹದೇವಪ್ಪ, ವೀರಯ್ಯಸ್ವಾಮಿ ಹಿರೇಮಠ, ತಿರಕಪ್ಪ ಮಡಿವಾಳರ ಮುಂತಾದವರು ಜನಿಸಿ ಅಸಾಮಾನ್ಯ ಸಾಧನೆ ಮಾಡಿ ಭಾರತದ ಭೂಪಟದಲ್ಲಿ ಹಾವೇರಿ ಜಿಲ್ಲೆ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ. ಇಂತಹ ಜಿಲ್ಲೆಯ ಕೇಂದ್ರ ಸ್ಥಾನ ಹಾವೇರಿ.
ಹಾವೇರಿಯನ್ನು ನಳಮಹಾರಾಜ ಕಟ್ಟಿಸಿದನೆಂದು ಅದರಿಂದ ನಳಪುರಿ ಎಂದು ಕರೆಯುತ್ತಿದ್ದರೆಂಬ ಪ್ರತೀತಿ ಇದೆ. ಹಾವು ಏರಿ ಸೇರಿ ಹಾವೇರಿಯಾಯಿತೆಂದು ವಾಡಿಕೆಯ ಮಾತಿದೆ. ಹಾವೇರಿ ಉತ್ತರ ಕರ್ನಾಟಕದ ಹೆಬ್ಬಾಗಿಲು, ಶಿಲ್ಪಕಲೆಯಿಂದ ಪುರಶಿದ್ದೇಶ್ವರ ದೇವಸ್ಥಾನ ವಿಶಾಲವಾದ ಹೆಗ್ಗೇರಿ ಕೆರೆ, ಹಾವೇರಿಯ ನ್ಯಾಯ, ಪ್ರಸಿದ್ದ ಯಾಲಕ್ಕಿ ಮಾಲೆಗಳು, ಯಾಲಕ್ಕಿ ಬೆಳೆಯದಿದ್ದರೂ ಪ್ರಸಿದ್ಧವಾದ ಯಾಲಕ್ಕಿ ವ್ಯಾಪಾರದಿಂದ ಯಾಲಕ್ಕಿಯ ಕಂಪನ್ನು ದೇಶದ ತುಂಬೆಲ್ಲ ಪಸರಿಸಿದ ಕೀರ್ತಿ ಹಾವೇರಿಗೆ ಸಲ್ಲುತ್ತದೆ. ಹಾವೇರಿಯಲ್ಲಿ 63 ಮಠಗಳಿದ್ದು ಮರಿಕಲ್ಯಾಣವೆಂಬ ಹೆಸರಿದೆ. ಅವುಗಳಲ್ಲಿ ಈಗ 4 ಮಠಗಳು ಪ್ರವರ್ಧಮಾನದಲ್ಲಿದ್ದು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಾ ಜನಮುಖಿ ಸಮಾಜಮುಖ ಕಾರ್ಯ ಮಾಡುತ್ತಿರುವದು ಪ್ರಶಂಸನೀಯವಾಗಿದೆ.
ಹಾವೇರಿಯಲ್ಲಿರುವ ಮಠಗಳಲ್ಲಿ ಮುಕುಟಪ್ರಾಯವಾದ ಶ್ರೀ ಹುಕ್ಕೇರಿಮಠವು ಶ್ರೀ ಮ.ನಿ.ಪ್ರ. ರಾಚೋಟೇಶ್ವರ ಮಹಾಸ್ವಾಮಿಗಳಿಂದ ಸ್ಥಾಪನೆಯಾಗಿ, ಶಿವಪೂಜಾನಿಷ್ಠರೂ ಶಾಪಾನುಗ್ರಹ ಸಮರ್ಥರೂ ಆದ ಪರಮಪೂಜ್ಯ ಶ್ರೀ ಮ.ನಿ.ಪ್ರ. ಶಿವಬಸವ ಮಹಾಶಿವಯೋಗಿಗಳಿಂದ ಪ್ರವರ್ಧಮಾನಕ್ಕೆ ಬಂದು ಪರಮಪೂಜ್ಯ ಶ್ರೀ ಮ.ನಿ.ಪ್ರ ಶಿವಲಿಂಗ ಮಹಾಶಿವಯೋಗಿಗಳ ಅವಧಿಯಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳ ಮೂಲಕ ಜನಮಾನಸಕ್ಕೆ ಹತ್ತಿರವಾಯಿತು. 1948 ರಲ್ಲಿ ಹುಕ್ಕೇರಿಮಠದ ನಿರಂಜನ ಪೀಠವನ್ನಲಂಕರಿಸಿದ ಪೂಜ್ಯರು 1950 ರಲ್ಲಿ ಪೂಜ್ಯ ಯಶವಂತಪುರದ ಮೌನ ಮಹಾಸ್ವಾಮಿಗಳ ಸಹಕಾರದಿಂದ ಶ್ರೀ ಶಿವಬಸವೇಶ್ವರ ಉಚಿತ ಪ್ರಸಾದ ನಿಲಯವನ್ನು ಹಾವೇರಿಯ ಸುತ್ತಮುತ್ತಲ ಗ್ರಾಮೀಣ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲು ಪ್ರಾರಂಭಿಸಿದರು. 1966 ರಲ್ಲಿ ಶ್ರೀ ತಿವಲಿಂಗೇಶ್ವರ ವಾಚನಾಲಯ ಸಾಹಿತ್ಯದ ಒಲವು ಮೂಡಿಸಲು ಪ್ರಾರಂಭ ಮಾಡಿ ಓದುವ ಕಲೆ ಬೆಳೆಸಲು ಜ್ಞಾನದ ದೀವಿಗೆ ಪ್ರತಿಯೊಬ್ಬರಲ್ಲಿ ಬೆಳಗುವಂತೆ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದರು.
1970 ರ ದಶಕದಲ್ಲಿ ಶ್ರೀ ಹುಕ್ಕೇರಿಮಠದಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರಾವಣ ಮಾಸ, ಬಸವಜಯಂತಿ ಹಾಗೂ ಪೂಜ್ಯರ ಪುಣ್ಯ ಸ್ಮರಣೋತ್ಸವಗಳ ಸಂದರ್ಭದಲ್ಲಿ ಜರುಗುತ್ತಿದ್ದವು. ರೈತರಿಗೆ ಅನುಕೂಲವಾಗಲೆಂದು 1971 ರಲ್ಲಿ ಶ್ರೀ ಶಿವಬಸವ ಜಾನುವಾರು ಜಾತ್ರೆಯನ್ನು ಪ್ರಾರಂಭಿಸಲಾಯಿತು.
ವಿಶ್ವಗುರು ಬಸವೇಶ್ವರರ ಜಯಂತಿಯ ಶುಭ ಸಂದರ್ಭದಲ್ಲಿ ಆಡಂಬರದ ಮದುವೆಗಳಿಂದ ಬಡಭಕ್ತರು ಅನುಭವಿಸುವ ಆರ್ಥಿಕ ಹೊರೆಯಿಂದ, ತೊಂದರೆಗಳಿಂದ ಮುಕ್ತರನ್ನಾಗಿಸಲು ಸಾಮೂಹಿಕ ವಿವಾಹ ನೆರವೇರಿಸುವ ಆದರ್ಶಪ್ರಾಯ ಕಾರ್ಯಕ್ರಮ ಶ್ರೀಮಠದಲ್ಲಿ ಪ್ರತಿವರ್ಷ ನಡೆಯುತ್ತ ಬಂದಿದೆ.
ಪ್ರಸಾದ ನಿಲಯದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾವೇರಿ ನಗರದಲ್ಲಿದ್ದ ನಗರಸಭೆಯ ಪ್ರೌಢಶಾಲೆ ಹಾಗೂ ಜಿ.ಹೆಚ್ ಕಾಲೇಜಿಗೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದರೆ ಪ್ರಸಾದ ನಿಲಯ, ಸಾಮೂಹಿಕ ವಿವಾಹ, ರೈತರಿಗೆ ಜಾನುವಾರು ಜಾತ್ರೆ, ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಂದ ಹುಕ್ಕೇರಿಮಠ ಸಮಾಜಮುಖಿ ಕಾರ್ಯಗಳ ಕೇಂದ್ರವಾಗಿತ್ತು. ಮತ್ತು ಮಕ್ಕಳು ನಾಡಿನ ಸಂಪತ್ತು ಅವರ ಅಂತರಂಗದ ಭಾವನೆಗಳನ್ನು ಸುಪ್ತಚೇತನವನ್ನು ಉದ್ದೀಪನಗೊಳಿಸಿ ಸತ್ಪಜೆಗಳನ್ನಾಗಿ ಮಾಡುವದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಭಾವಿಸಿದ ಶ್ರೀಗಳು ಒಂದು ಶಿಕ್ಷಣ ಸಂಸ್ಥೆ ಪ್ರಾರಂಭಿಸಿದರೆ ಇವುಗಳಿಗೆ ಪ್ರೇರಕವಾಗಬಹುದೆಂದು ಆಲೋಚಿಸಿ
ಸುವರ್ಣಸಿರಿ ಪೂಜ್ಯ ಶ್ರೀ ಮ.ನಿ.ಪ್ರ ಶಿವಲಿಂಗ ಮಹಾಶಿವಯೋಗಿಗಳ ಮನದಲ್ಲಿ ಮೂಡಿಬಂತು. ಅದನ್ನು ಶ್ರೀಮಠದ ಸದ್ಭಕ್ತರಲ್ಲಿ ಪ್ರಸ್ತಾಪಿಸಿದರು.
1970 ರ ದಶಕದಲ್ಲಿ ಹಾವೇರಿಯ ಜನಪ್ರಯಯ ಶಾಸಕರಾಗಿದ್ದವರು ಮಾನ್ಯಶ್ರೀ ಎಫ್.ಎಸ್. ತಾವರೆಯವರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೈಲಾರ ಮಹದೇವಪ್ಪನವರೊಂದಿಗೆ ಗುರುತಿಸಿಕೊಂಡವರು. ಶ್ರೀ ಹಳ್ಳಿಕೇರಿ ಗುದ್ದೆಪ್ಪನವರ ಗರಡಿಯಲ್ಲಿ ಪಳಗಿದವರು. ಅವರ ಸ್ನೇಹಿತರಾದ ಶ್ರೀ ಕೆ.ಎಂ. ನೆಲವಿಗಿ, ಶ್ರೀ ಷಣ್ಮುಖಪ್ಪ ಹೊಸಮನಿ, ಶ್ರೀ ಆರ್.ಬಿ. ಗಿರ್ಜಿ, ಶ್ರೀ ಎಸ್.ಸಿ. ಚೌಶೆಟ್ಟಿ, ಶ್ರೀ ಎಸ್.ಬಿ. ಕುರುಬಗೊಂಡ, ಶ್ರೀ ಬಿ.ಬಿ. ಹನುಮನಹಳ್ಳಿ, ಶ್ರೀ ವೀರಭದ್ರಪ್ಪ ಗಿರ್ಜಿ. ಶ್ರೀ ನೀಲಪ್ಪ ಸಂಕೀಪುರ, ಶ್ರೀ ಹನುಮಣ್ಣ ಜಂಗಳಿ, ಶ್ರೀ ಮೀಯಾಸಾಬ ಕಿಲ್ಲೇದಾರ, ಶ್ರೀ ಗದಿಗೆಪ್ಪ ಕಳ್ಳಿಹಾಳ ಇವರೆಲ್ಲ ಸೇರಿ ಹಾವೇರಿ ನಗರದಲ್ಲಿ ಸಾಮಾನ್ಯ ವರ್ಗದ ಜನರಿಗೆ ಅನುಕೂಲವಾಗಲು ಶೈಕ್ಷಣಿಕವಾಗಿ ಹಿಂದುಳಿದ ತಾಲೂಕಾದ ಹಾವೇರಿಯಲ್ಲಿ ಶಿಕ್ಷಣ ಪ್ರಸಾರ ಮಾಡಿ ಸತ್ಪಜೆಗಳನ್ನು ತಯಾರುಮಾಡಬೇಕೆಂಬ ಸದುದ್ದೇಶಂದ ಶೈಕ್ಷಣಿಕ ಸಂಸ್ಥೆ ಪ್ರಾರಂಭಿಸಲು ನಿರ್ಧರಿಸಿ ಕಾರ್ಯೋನ್ಮುಖರಾಗಿಹಾವೇರಿ ತಾಲೂಕ ಶಿಕ್ಷಣ ಸಂಸ್ಥೆಯನ್ನು 1972 ರಲ್ಲಿ ಪ್ರಾರಂಭಿಸಿದರು. 1973-74 ನೇ ಶೈಕ್ಷಣಿಕ ವರ್ಷದಲ್ಲಿ ಹಾವೇರಿ ನಗರದಲಿ ಕನ್ನಡ ಮಾಧ್ಯಮ ಪ್ರೌಢಶಾಲೆ ಪ್ರಾರಂಭಿಸಲು ಕರ್ನಾಟಕ ಸರ್ಕಾರದಿಂದ ಅನುಮತಿ ಪಡೆದು ಪ್ರಾರಂಭಿಸಲು ಬೇಕಾಗುವ ಸೂಕ್ತ ಕಟ್ಟಡ ಮೈದಾನಕ್ಕಾಗಿ ಹಾವೇರಿಯಲ್ಲಿ ಶೋಧಕಾರ್ಯದಲ್ಲಿ ತೊಡಗಿದರು. ಆದರೆ ಲಭ್ಯವಾಗದೇ ಇರುವಾಗ ಶ್ರೀ ಹುಕ್ಕೇರಿಮಠದ ಚೇರಮನ್ನರು ಶ್ರೀಗಳ ಒಟ್ಟುಮೊಕ್ಯಾರಿಗಳೂ ಆಗಿದ್ದ ಶ್ರೀ ಮಾಗನೂರ ಶಿವಲಿಂಗಪ್ಪನವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಶ್ರೀ ಫಕ್ಕೀರಪ್ಪನವರು ಎಸ್. ತಾವರೆಯವರ ಪರಮಾಪ್ತರು, ಅವರಲ್ಲಿ ವಿಷಯ ಪ್ರಸ್ತಾಪಿಸಿದಾಗ ಪೂಜ್ಯ ಶ್ರೀಗಳವರು ಶೈಕ್ಷಣಿಕ ಸಂಸ್ಥೆ ಪ್ರಾರಂಭಿಸುವ ಅಭಿಲಾಷೆ ಇದೆ. ಅವರಲ್ಲಿ ವಿಷಯ ಪ್ರಸ್ತಾಪಿಸೋಣ ಎಂದು ಶ್ರೀ ತಾವರೆಯವರು ಹಾಗೂ ಅವರ ಆಪ್ತರು ಕೂಡಿ ಶ್ರೀಮಠಕ್ಕೆ ಬಂದು ವಿಷಯವನ್ನಿಟ್ಟಾಗ ಪೂಜ್ಯರು ಶ್ರೀ ಮಠದಲ್ಲಿ ವಿಶಾಲವಾದ ಜಾಗೆ ಇದೆ ಕಟ್ಟಡವೂ ಇದೆ ವಿದ್ಯಾರ್ಥಿಗಳಿಗೆ ಪ್ರಸಾದ ನಿಲಯವಿದೆ ಹಾಗೂ ತಾಲೂಕಾ ಮಟ್ಟದ ಸರಕಾರಿ ಸಭೆ ಸಮಾರಂಭಗಳು ಇಲ್ಲಿ ನಡೆಯುತ್ತವೆ. ಶಾಲೆಯೊಂದು ತೆರೆಯುವದು ಬಾಕಿ ಇತ್ತು ನೀವು ನಡೆಸುವದಾದರೆ ನಮ್ಮ ಆಶೀರ್ವಾದ ಇದೆ ಎಂದು ಶಾಲೆ ನಡೆಸಲು ಅನುಮತಿ ನೀಡಿದ್ದು ಶೈಕ್ಷಣಿಕ ಚಟುವಟಿಕೆ ಪ್ರಾರಂಭಿಸಲು ನಾಂದಿಯಾಯಿತು. ಈ ರೀತಿ ಹಾವೇರಿ ತಾಲೂಕಾ ಶಿಕ್ಷಣ ಸಮಿತಿಗೆ ಶಾಲೆ ನಡೆಸಲು ಸ್ಥಳವಕಾಶದ ಅವಶ್ಯಕತೆ ಇತ್ತು ಶ್ರೀಮಠದಲ್ಲಿ ಶೈಕ್ಷಣಿಕ ಚಟುವಟಿಕೆ ಪ್ರಾರಂಭಿಸುವ ಅಗತ್ಯ ಇತ್ತು. ಈ ರೀತಿ ಶ್ರೀ ಹುಕ್ಕೇರಿಮಠದಲ್ಲಿ ಪ್ರಶಾಂತ ಹಾಗೂ ಧಾರ್ಮಿಕ ಪರಿಸರದಲ್ಲಿ ಹಾವೇರಿ ತಾಲೂಕ ಶಿಕ್ಷಣ ಸಮಿತಿಯ ಪ್ರೌಢಶಾಲೆಯು "ಹುಕ್ಕೇರಿಮಠ ಶಿವಬಸವೇಶ್ವರ ಪ್ರೌಢ ಶಾಲೆ" ಎಂಬ ಅಭಿದಾನದೊಂದಿಗೆ ದಿನಾಂಕ 30-6-1973 ರಂದು ಶ್ರೀ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ, ಚೇರಮನ್ನರಾದ ಶ್ರೀ ಎಫ್.ಎಸ್. ತಾವರೆ ಯವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ ಮಾಗನೂರ ಶಿವಲಿಂಗಪ್ಪನವರ ನೇತೃತ್ವದಲ್ಲಿ ಪ್ರಾರಂಭವಾಯಿತು. ಶಾಲೆಯ ದೈನಂದಿನ ಕಾರ್ಯಗಳನ್ನು ಅವಶ್ಯಕತೆಗಳನ್ನು ಪೂರೈಸಿ ಸುಗಮವಾಗಿ ಮುನ್ನೆಡೆಸಿಕೊಂಡು ಹೋಗಲು ಶಾಲಾ ಸುಧಾರಣಾ ಸಮಿತಿ (ಸ್ಥಾನಿಕ ಸಮಿತಿ) ಯನ್ನು ಶ್ರೀ ಮಠದ ಚೇರಮನ್ನರು ಒಟ್ಟಮೊಕ್ಯಾರಿಗಳಾದ ಶ್ರೀ ಮಾಗನೂರ ಶಿವಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ಕಾರ್ಯದರ್ಶಿಗಳಾಗಿ ಶ್ರೀ ಬಸಯ್ಯನವರು .ಎಸ್. ಸಾವಿರಮಠ ಹಾಗೂ ಸದಸ್ಯರಾಗಿ ಶ್ರೀ ಸಿದ್ರಾಮಪ್ಪ ಎಸ್. ಮುಷ್ಟಿ. ಶ್ರೀ ಶಿದ್ದಲಿಂಗಯ್ಯ .ಆರ್. ಭರತನೂರಮಠ, ಶ್ರೀ ಗುರುಶಾಂತಪ್ಪ ಆರ್. ಶೀಲವಂತರ, ಶ್ರೀ ತಿದ್ಧಲಿಂಗಪ್ಪ ಎ. ಹಿಟ್ನಳ್ಳಿ. ಶ್ರೀ ಶರಣಪ್ಪ ಬಿ. ಕೊಳಕೂರ. ಶ್ರೀ ಶಿದ್ದಪ್ಪ ಸಿ. ಚೌಶೆಟ್ಟಿ ಹಾಗೂ ಶ್ರೀ ರಾವಪ್ಪ ಆರ್. ತಟಪಟ್ಟಿಯವರಿದ್ದು ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಣೆಗೊಳಿಸುತ್ತಾ ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದರು.
'ಜೀವನ ಕುಳಿತು ಆಕಳಿಸುವವನಿಗಲ್ಲ ತಿಳಿದು ಈಸುವವನಿಗೆ. ದುಡಿಯುವವನು ಉಳಿಯುತ್ತಾನೆ ಆಲಸಿ ಅಳಿಯುತ್ತಾನೆುಂಬ ಉಕ್ತಿಯಂತೆ ಶಿಕ್ಷಕರ ಪರಿಶ್ರಮ ಹಾಗು ಆಡಳಿತಮಂಡಳಿಯ ಪ್ರೋತ್ಸಾಹ ಮತ್ತು ಪೂಜ್ಯರ ಆಶೀರ್ವಾದದಿಂದ 1973-74 ರಲ್ಲಿ ಕೇವಲ 18 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಶಾಲೆ ವರ್ಷಾಂತ್ಯಕ್ಕೆ 38 ಕ್ಕೆ ಏರಿಕೆಯಾಯಿತು. 1974-75 ನೇ ಸಾಲಿನಲ್ಲಿ ಪ್ರೌಢಶಾಲೆಗೆ ಪೂರಕವಾಗಲೆಂಬ ಹಾಗೂ ಪ್ರಾಥಮಿಕ ಹಂತದಿಂದ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗಾಗಿ ನೀಡಬೇಕೆಂಬ ಮಹಾದಾಶೆಯಿಂದ ಪ್ರಾಥಮಿಕ 5 ನೇ ತರಗತಿಯನ್ನು ಇಲಾಖೆಯ ಅನುಮತಿಯೊಂದಿಗೆ ಪ್ರಾರಂಭಿಸಲಾಯಿತು. 1974-75 ನೇ ಸಾಲಿನಲ್ಲಿ 5,8 ಹಾಗೂ ಒಂಭತ್ತನೇ ತರಗತಿ ಶುಕ್ಲಪಕ್ಷ ಚಂದ್ರನಂತೆ 189 ವಿದ್ಯಾರ್ಥಿಗಳು ದಾಖಲಾಗಿ ಶಾಲೆಯನ್ನು ನಡೆಸುವ ಬಗ್ಗೆ ಬರವಸೆ ಮೂಡಿತು 1975-76 ನೇ ಸಾಲಿನಲ್ಲಿ 5.6.8.9 ಹಾಗೂ 10 ನೇ ತರಗತಿಯಲ್ಲಿ 290 ವಿದ್ಯಾರ್ಥಿಗಳು ಅಭ್ಯಾಸಿಸುತ್ತಿದ್ದು 10 ನೇ ತರಗತಿಯಲ್ಲಿ ಆ ವರ್ಷ ಶೇ. 42 ಪಲಿತಾಂಶ ಬಂದಿತು. 1976-77 ನೇ ಸಾಲಿನಲ್ಲಿ 5 ರಿಂದ 10 ನೇ ತರಗತಿ ವರೆಗೆ 416 ವಿದ್ಯಾರ್ಥಿಗಳಿದ್ದು ಎಸ್.ಎಸ್.ಎಲ್.ಸಿ. ಪಲಿತಾಂಶ ಶೇ. 65 ರಷ್ಟಾಗಿ ಸಮಾಧಾನಕರ ಅಂಶವಾಯಿತು. 1977-78 ನೇ ಸಾಲಿನಲ್ಲಿ 523 ವಿದ್ಯಾರ್ಥಿಗಳಿದ್ದು ಸಂಖ್ಯಾದೃಷ್ಠಿಯಿಂದ ಉತ್ತಮ ಬೆಳವಣಿಗೆಯಾಯಿತು. ಈ ರೀತಿ ಪ್ರೌಢಶಾಲೆಯ ಸರ್ವತೋಮುಖ ಬೆಳವಣಿಗೆ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಯ ತೃಪ್ತಿಕರವಾದ ಸೇವೆ, ಆಡಳಿತಮಂಡಳಿ ಪ್ರೋತ್ಸಾಹ ಹಾಗೂ ಸಹಕಾರ ಮನಗಂಡ ಶಿಕ್ಷಣ ಇಲಾಖೆ 1978 ಎಪ್ರಿಲ್ ನಿಂದ ವೇತನಾನುಧಾನಕ್ಕೆ ಸರಕಾರದ ನಿಯಮದಂತೆ ಒಳಪಡಿಸಲಾಯಿತು. ಶಾಲೆಯ 523 ವಿದ್ಯಾರ್ಥಿಗಳಲ್ಲಿ 260 ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಪ್ರವೇಶ ಪಡೆದಿದ್ದರು. ಅವರಲ್ಲಿ 220 ವಿದ್ಯಾರ್ಥಿಗಳಿಗೆ ಶಿವಬಸವೇಶ್ವರ ಉಚಿತ ಪ್ರಸಾದ ನಿಲಯದಲ್ಲಿ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗಿತ್ತು. ಜಾಗತಿಕ ಆಹಾರ ಯೋಜನೆಯ ಮುಖಾಂತರ 214 ವಿದ್ಯಾರ್ಥಿಗಳಿಗೆ ಕೇರ್ ಸಂಸ್ಥೆಯ ಮುಖಾಂತರ 130 ವಿದ್ಯಾರ್ಥಿಗಳಿಗೆ ಸಾಯಂಕಾಲ ಉಪಹಾರದ ವ್ಯವಸ್ಥೆ ಮಾಡಲಾಯಿತು. ಶೈಕ್ಷಣಿಕವಾಗಿ ಹಾಗೂ ಭೌತಿಕವಾಗಿ ಉತ್ತಮ ಪ್ರಗತಿ ಸಾಧಿಸಿದ್ದರ ಫಲವಾಗಿ 8ನೇ ತರಗತಿಯಲ್ಲಿ 4 ವಿಭಾಗಗಳು 9ನೇ ತರಗತಿಯಲ್ಲಿ 3 ಹಾಗೂ 10 ನೇ ತರಗತಿಯಲ್ಲಿ 3 ಹೀಗೆ 10 ವಿಭಾಗಗಳನ್ನು ಹೊಂದಿ ಪ್ರೌಢಶಾಲೆಯಲ್ಲಿ 760 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವಂತಾಯಿತು. 5,6 ಹಾಗೂ 7ನೇ ತರಗತಿಯಲ್ಲಿ ತಲಾ 2 ವಿಭಾಗ ಹೊಂದಿ 400 ವಿದ್ಯಾರ್ಥಿಗಳು ಅಭ್ಯಾಸ ಮಾಡುವಂತಾಯಿತು. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಮುಂದೆ 1 ರಿಂದ 2 ನೇ ತರಗತಿಯ ವರೆಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಯಿತು. ಇದಕ್ಕೆಲ್ಲ ಪಾಠೋಪಕರಣ ಹಾಗೂ ಪೀಠೋಪಕರಣ ಆಡಳಿತ ಮಂಡಳಿ ವದಗಿಸಿತು. 1976-77 ನೇ ಸಾಲಿನ ಶಾಲಾ
: ಸುವರ್ಣಸಿರಿ
ಹುಕ್ಕೇರಿಮಠ ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರಧ ಶಾಲೆಗಳ ಸುವರ್ಣ ಮಹೋತ್ಸವ-2025
ಕ್ರೀಡಾಕೂಟದಲ್ಲಿ ಶಾಲೆಯ ಕಬ್ಬಡ್ಡಿ ತಂಡ ಮತ್ತು ವಾಲಿಬಾಲ್ ತಂಡ ತಾಲೂಕಾ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ಬೆಳಗಾವಿ ವಿಭಾಗ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಪಡೆದು ಕೀರ್ತಿ ತಂದಿದ್ದು ಇತಿಹಾಸ, 1985-86 ನೇ ಸಾಲಿನಲ್ಲಿ ಪ್ರೌಢಶಾಲೆ ವಿದ್ಯಾರ್ಥಿ ಬಸವರಾಜ ಹಾಲಪ್ಪನವರ ಪೋಲ್‌ವಾಲ್ಟ್ ಸ್ಪರ್ಧೆಯಲ್ಲಿ ರಾಜ್ಯದಿಂದ ಆಯ್ಕೆಯಾಗಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದು ಅಭಿನಂದನೀಯ.
ವಿದ್ಯಾರ್ಥಿಗಳ ಸಂಖ್ಯೆಗಳಿಗನುಗುಣವಾಗಿ ತರಗತಿಗಳನ್ನು ನಡೆಸಲು ಕೊಠಡಿಗಳು ಬೇಕಾಗಿದ್ದರಿಂದ ಶ್ರೀ ಮಠದ ತೊಂಡಿಹಾಳ ಜೀನಿನಲ್ಲಿ 11 ಕೊಠಡಿಗಳನ್ನು ಹಾಗೂ ಮಠದ ಆವರಣದಲ್ಲಿ 5 ಕೊಠಡಿಗಳನ್ನು ವ್ಯವಸ್ಥೆ ಮಾಡಲಾಯಿತು. ಶ್ರೀಮಠದಿಂದ ತೊಂಡಿಹಾಲ ಜೀನಿಗೆ ಹೋಗುವಾಗ ಹಾವನೂರ ಎಕ್ಕುಂಬಿ ರಸ್ತೆಯಲ್ಲಿ ವಿದ್ಯಾರ್ಥಿಗಳು ದಾಟುವ ಸಮಸ್ಯೆ ಎದುರಾದ್ದರಿಂದ ಶ್ರೀ ಮಠಕ್ಕೆ ಹೊಂದಿಕೊಂಡ ಶ್ರೀ ನಡುವಿನಮತ ಅವರ ಮಾಲಿಕತ್ವದಲ್ಲಿದ್ದ ರಿ.ಸ. ನಂ -1 ವಿಸ್ತೀರ್ಣ 2 ಎಕರೆ 20 ಗುಂಟೆ ಹೊಲವನ್ನು ರೂ 26,500 ರೂ ಗಳಿಗೆ ಖರೀದಿ ಮಾಡಲಾಯಿತು. ಅದೇರೀತಿ ಶ್ರೀಮಠ ಹಾಗೂ ಪೋಸ್ಟ್ ಆಫೀಸ್ ಮಧ್ಯದಲ್ಲಿದ್ದ ಗೌರಿಮಠದ ಮಾಲಿಕತ್ವದಲ್ಲಿದ್ದ ಸಿ.ಟಿ.ಎಸ್. ನಂ-2949 ಡಿ ಅಳತೆ : 86 ಅಡಿ ಅಗಲ 188 ಅಡಿ ಉದ್ದ ಇರುವ ಜಾಗೆಯನ್ನು ರೂ. 60,000 ಕ್ಕೆ ಖರೀದಿ ಮಾಡಿಕೊಳ್ಳಲಾಯಿತು. ಆ ಜಾಗೆಯಲ್ಲಿ ಗೋಡೌನ್ ಗಳಿದ್ದವು ಅವುಗಳನ್ನೇ ಸ್ವಚ್ಚಗೊಳಿಸಿ ದುರಸ್ಥಿ ಮಾಡಿ ತರಗತಿ ನಡೆಸಲು ಆಡಳಿತ ಮಂಡಳಿಯವರು ಅನುಕೂಲ ಮಾಡಿಕೊಟ್ಟರು.
ಶಿಕ್ಷಣ ಪ್ರೇಮಿಗಳಾದ ಪರಮಪೂಜ್ಯ ಶ್ರೀ ಮ.ನಿ.ಪ್ರ, ಶಿವಲಿಂಗ ಮಹಾಶಿವಯೋಗಿಗಳವರ ಷಷ್ಟ್ರಬ್ಬಿ ಸಮಾರಂಭವನ್ನು 1978 ಜನೇವರಿಯಲ್ಲಿ ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು. ಆ ಶುಭ ಸಂದರ್ಭದಲ್ಲಿ ಪೂಜ್ಯರು ತಮ್ಮ ಪಾದಕಾಣಿಕೆಯಿಂದ ಬಂದ ಹಣದಲ್ಲಿ 10,000 ರೂ ಗಳನ್ನು ಖಾಯಂ ನಿಧಿಯಾಗಿ ಇಟ್ಟು ಶಾಲೆಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ರೂಪದಲ್ಲಿ ನೀಡಲು ವ್ಯವಸ್ಥೆ ಮಾಡಿದ್ದಾರೆ
ಅತ್ಯಂತ ಕ್ರಿಯಾಶೀಲತೆಯಿಂದ ಫಲಾಪೇಕ್ಷೆಯಿಲ್ಲದೇ ತಮಗೆ ಮಕ್ಕಳಿಲ್ಲದಿದ್ದರೂ ಶಾಲೆಯಲ್ಲಿರುವ ಮಕ್ಕಳನ್ನು ಪ್ರಸಾದ ನಿಲಯದಲ್ಲಿರುವ ಮಕ್ಕಳನ್ನು ತಮ್ಮವೆಂದೇ ಭಾವಿಸಿಕೊಂಡ ಶ್ರೀ ಹುಕ್ಕೇರಿಮಠ ಮತ್ತು ಶಾಲೆಗಳನ್ನು ತಮ್ಮ ಎರಡು ಕಣ್ಣುಗಳಂತೆ ಕಾಪಾಡಿಕೊಂಡು ಬಂದು ಅವುಗಳ ಅಭಿವೃದ್ಧಿಗಾಗಿ ಅಹರ್ನಿಶಿ ಶ್ರಮಿಸಿದ ಹಿರಿಯ ಜೀವ ಶ್ರೀ ಮಾಗನೂರ ಶಿವಲಿಂಗಪ್ಪನವರು 15-6-1985 ರಂದು ವಿಧಿವಶವಾದರು. ಆವೇಳೆಗಾಗಲೇ ಸನ್ಮಾನ್ಯ ತಾವರೆಯವರು ಮಾಜಿ ಶಾಸಕರಾಗಿದ್ದು ಇಳಿವಯಸ್ಸಿನಲ್ಲಿದ್ದರು. ಅವರಿಗೂ ಶಾಲೆಯನ್ನು ಇಲ್ಲಿಯವರೆಗೂ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ಶ್ರೀಮಠದ ಸುಧಾರಣಾ ಸಮಿತಿಯವರೇ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿರುವದರಿಂದ ಶ್ರೀ ಮಠದವರಿಗೆ ಶಾಲೆ ನಡೆಸುವ ನಿಟ್ಟಿನಲ್ಲಿ ವಹಿಸಿಕೊಡಲು ಶ್ರೀಗಳಿಗೆ ವಿನಂತಿಸಲಾಗಿ ಶ್ರೀ ಮಠದಿಂದ ಒಂದು ವಿದ್ಯಾಸಂಸ್ಥೆ ನೋಂದಾಯಿಸಬೇಕೆಂದು ನಿರ್ಧಾರ ಕೈಗೊಂಡು ''ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠ" ಎಂಬ ಶೈಕ್ಷಣಿಕ ಸಂಸ್ಥೆಯನ್ನು 1985 ಜುಲೈ 22 ರಂದು ಬೆಳಗಾವಿಯ ಧಾರ್ಮಿಕ ದತ್ತಿಯಲ್ಲಿ
ನೋದಾಯಿಸಿದ ಸಂಸ್ಥೆಯ ಪದಾಧಿಕಾರಿಗಳು.
ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠ (ರಿ) ಹುಕ್ಕೇರಿಮಠ ಹಾವೇರಿ ಸಂಸ್ಥಾಪಕ ಆಡಳಿತ ಮಂಡಳಿ ದಿನಾಂಕ 27-07-1985 ರಿಂದ.
ಗೌರವ ಅಧ್ಯಕ್ಷರು
ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳು, ಹುಕ್ಕೇರಿಮಠ, ಹಾವೇರಿ.
1985 ರಲ್ಲಿ ಹಾವೇರಿ ತಾಲೂಕಾ ಶಿಕ್ಷಣ ಸಮಿತಿಯಿಂದ ಶ್ರೀ ಹುಕ್ಕೇರಿಮಠ ಶಿವಬಸವೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು. 1983 ಅಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಯೋಜಿಸಲಾಗಿತ್ತು ಅಂದು ಶಾಲಾ ಸಮಿತಿಯ ಚೇರಮನ್ನರಾದ ಎಸ್.ಬಿ. ಮಾಗನೂರ ಅವರು ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಊರಿನಲ್ಲಿರುವ ತಮ್ಮ ಸ್ನೇಹಿತರಿಗೆ ಶ್ರೀ ಮಠದ ಭಕ್ತರಿಗೆ ಅಧಿಕಾರಿಗಳಿಗೆ ಹಾಗೂ ಎಲ್ಲ ಶಾಲಾ ವಿದ್ಯಾರ್ಥಿಗಳಿಗೆ ಶ್ರೀಮಠದ ಪ್ರಸಾದ ಮಾಡಿಸುವ ಸತ್ ಸಂಪ್ರದಾಯ ಹಾಕಿಕೊಂಡು ಬಂದಿದ್ದರು. ವಿದ್ಯಾರ್ಥಿಗಳು ಪ್ರಭಾತಫೇರಿಯ ಮುಖಾಂತರ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಗರಸಭಾ ಪ್ರೌಢಶಾಲಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಮಠಕ್ಕೆ ಪ್ರಸಾದಕ್ಕಾಗಿ ಸಾಲಾಗಿ ಶಿಸ್ತಿನಿಂದ ಬಂದರು. ಎಲ್ಲ ವಿದ್ಯಾರ್ಥಿಗಳು ಸಮವಸ್ತ್ರ ಮತ್ತು ಕಾವಿ ಟೈ ಧರಿಸಿದ್ದರು. ವಿದ್ಯಾರ್ಥಿಗಳ ಸಮೂಹ ನೋಡಲು ನಯನಮನೋಹರವಾಗಿತ್ತು. ಆದರೆ ಅದರಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಶೂಹಾಗೂ ಸಾಕ್ಷಗಳನ್ನು ಹಾಕಿಕೊಂಡಿರಲಿಲ್ಲ. ಅಂದು ಊಟಕ್ಕೆ ಆಗಮಿಸಿದ ಹಾವೇರಿಯ ಪ್ರಸಿದ್ಧ ವರ್ತಕರಾಗಿದ್ದ ಶ್ರೀ ಹೇರೂರ ಶಿವಯೋಗಪ್ಪನವರು ಎಲ್ಲ ವಿದ್ಯಾರ್ಥಿಗಳು ಶೂ ಮತ್ತು ಸಾಕ್ಸ್ ಹಾಕಿದರೆ ಪ್ರಭಾತಫೇರಿಗೆ ಹೆಚ್ಚಿನ ಮೆರಗು ಬರುತ್ತದೆ ಎಂದು ಶಾಲೆಯಲ್ಲಿರುವ ಸುಮಾರು 1500 ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ಗಳನ್ನು ಕೊಡಿಸಿದರು. ಎಲ್ಲ ವಿದ್ಯಾರ್ಥಿಗಳ ಆನಂದಕ್ಕೆ ಪಾರವೇ ಇಲ್ಲದಂತಾಯಿತು. ಅದೇ ಸಂದರ್ಭದಲ್ಲಿ ಶಾಲಾ ಸಮಿತಿಯ ಗೌರವ ಕಾರ್ಯದರ್ಶಿಗಳಾಗಿದ್ದ ಶ್ರೀ ಸಾವಿರಮಠ ಬಸಯ್ಯನವರು ನಾನು ಶಾಲೆಗೆ ಬೇಕಾದ ಬ್ಯಾಂಡ್ ಸೆಟ್ ಕೊಡಿಸುತ್ತೇನೆಂದು ವಾಗ್ದಾನ ಮಾಡಿ ಕೆಲವೇ ದಿನಗಳಲ್ಲಿ ತರಲು ಹಣ ನೀಡಿ ಅನುಕೂಲ ಮಾಡಿದರು. ಇಂತಹ ದಾನಿಗಳ ನೆರವಿನಿಂದ 1984 ರ ಜನೇವರಿ 26 ರಂದು ನಡೆದ ಪತಃಸಂಚಲನದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು.ಅವರ ಸಮವಸ್ತ್ರ ಹಾಗೂ ಕಾಲಿನಲ್ಲಿ ಹಾಕಿದ್ದ ಶೂ ಮತ್ತು ಸಾಕ್ಸ್ಗಳನ್ನು ಧರಿಸಿದ್ದನ್ನು ನೋಡಿದ ನಾಗರಿಕರು ಹಾಗೂ ಸಮಾರಂಭದಲ್ಲಿನ ಅಧಿಕಾರಿಗಳು, ಶಾಸಕರು ಪ್ರಶಂಸಿಸಿದರು. ಇದೊಂದು ಅವಿಸ್ಮರಣೀಯ ಅನುಭವವೆಂದು ಹೇಳದೇ ಇರಲಾರೆ.
ಶಾಲಾ ಕಟ್ಟಡಕ್ಕಾಗಿ ಗೌರಿಮತ ಹಾಗೂ ನಡುವಿನಮಠ ಇವರಿಂದ ಖರೀದಿಸಿದ ಜಾಗೆಯಲ್ಲಿ ಇದ್ದ ಹಳೇ ಕಟ್ಟಡಕ್ಕೆ ಹಂಚಿನ ಛಾವಣಿ ಮಾಡಿಸಿ ಗಾಂಧಿ ರಸ್ತೆಗೆ ಹೊಂದಿಕೊಂಡ ಜಾಗೆಯಲ್ಲಿಶಾಲಾ ಕಟ್ಟಡಕ್ಕೆ ಹತ್ತಿಕೊಂಡ ಆಫೀಸ್ ಕಟ್ಟಡವನ್ನೂ ನಿರ್ಮಿಸಲಾಯಿತು. ತರಗತಿಗಳಿಗೆ ಹಾಗೂ ಕಛೇರಿಗೆ, ಶಿಕ್ಷಕರ ಕೊಠಡಿಗೆ ಅನುಕೂಲವಾಯಿತು. ಆದರೆ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನಿಡಲು, ಶಿಕ್ಷಕರು ಬಿಡುವಿನ ವೇಳೆಯಲ್ಲಿ ಓದಲು ಒಂದು ವಾಚನಾಲಯದ ಅವಶ್ಯಕತೆಯಿತ್ತು. ಈ ಮೊದಲೇ ಶಾಲಾ ವಿದ್ಯಾರ್ಥಿಗಳು ಬಂದು ಹಿರಿಯ ವಿದ್ಯಾರ್ಥಿಗಳ ಸಂಘ ಸ್ಥಾಪನೆ ಮಾಡಿಕೊಂಡಿದ್ದರು. ಶ್ರೀ ಶಿವಯೋಗಪ್ಪ ವಾಲಿಶೆಟ್ಟರ ಅಧ್ಯಕ್ಷರಾಗಿ ಶ್ರೀ ಜಗದೀಶ ತುಪ್ಪದ ಕಾರ್ಯದರ್ಶಿಗಳಾಗಿ ಹಾಗೂ ಶ್ರೀ ಮಹೇಶ ಚಿನ್ನಿಕಟ್ಟಿ ಖಜಾಂಚಿಯಾಗಿ ಎಲ್ಲ ವಿದ್ಯಾರ್ಥಿಗಳ ಸಂಘಟನೆ ಮಾಡಿ ಆಫೀಸ್ ಕಟ್ಟಡದ ಮೇಲೆ ಸುಸಜ್ಜಿತವಾದ ವಾಚನಾಲಯವನ್ನು 3-3-1999 ರಲ್ಲಿ ನಿರ್ಮಾಣ ಮಾಡಿದರು. ಅದರ ಉದ್ಘಾಟನೆ ಪರಮಪೂಜ್ಯ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳವರಿಂದ ನೆರವೇರಿತು.
ಈಗಾಗಲೇ ಹೇಳಿದಂತೆ ತರಗತಿಗಳು ಒಟ್ಟು ಪ್ರೌಢಶಾಲೆಯ 10 ಹಾಗೂ ಪ್ರಾಥಮಿಕ ಶಾಲೆಯ 14 ಒಟ್ಟು 24 ಶ್ರೀಮಠದ ಒಳಗೆ ಶ್ರೀ ಗೌರಿಮಠ ಇವರಿಂದ ಖರೀದಿ ಮಾಡಿದ ಜಾಗೆಯಲ್ಲಿ ಹಾಗೂ ತೊಂಡಿಹಾಳ ಜೀನಿನ ಪಕ್ಕದಲ್ಲಿರುವ ಗೋಡೌನ್ ಗಳಲ್ಲಿ ನಡೆಯುತ್ತಿದ್ದ ಇವೆಲ್ಲ ತರಗತಿಗಳು ಒಂದೇ ಕಡೆ ಇದ್ದರೆ ಅನುಕೂಲವೆಂದು ವಿಚಾರಮಾಡಿದ ಆಡಳಿತ ಮಂಡಳಿಯವರು ಪ್ರಾಥಮಿಕ ಶಾಲಾ ಕಟ್ಟಡವನ್ನು ಶ್ರೀಮಠಕ್ಕೆ (ತೋಟ) ಹೊಂದಿಕೊಂಡಂತೆ ಪೂರ್ವ ಪಶ್ಚಿಮವಾಗಿ 2001 ರಲ್ಲಿ ನಿರ್ಮಿಸಿದರು. ಈ ಕಾರ್ಯದಲ್ಲಿ ಆಡಳಿತ ಮಂಡಳಿಯ ಚೇರಮನ್ನರಾದ ಶ್ರೀ ಎಸ್.ಎಸ್. ಮುಷ್ಠಿ ಕಾರ್ಯದರ್ಶಿಗಳಾದ ಶ್ರೀ ಬಿ.ಎಸ್. ಸಾವಿರಮಠ ಮತ್ತು ಎಲ್ಲ ಸದಸ್ಯರು ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀ ಸಿ.ಎಸ್. ಮರಳಿಹಳ್ಳಿ ಮತ್ತು ಶಿಕ್ಷಕ ಶಿಕ್ಷಕಿಯರ ಅಪರಿಮಿತ ಪರಿಶ್ರಮ ಮೆಚ್ಚುವಂತಹದು.
ಸೈನಿಕ ಶಾಲೆಗೆ ಪ್ರವೇಶ :
1974 ರಲ್ಲಿ ಪ್ರಾಥಮಿಕ ಶಾಲೆ ಪ್ರಾರಂಭವಾದ ನಂತರ 5 ನೇ ತರಗತಿಯ ವಿದ್ಯಾರ್ಥಿಗಳು ಪ್ರಸಾದ ನಿಲಯದಲ್ಲಿರುತ್ತಿದ್ದರು.ಹಾವೇರಿಯಲ್ಲಿ ಎಂ.ಎಚ್. ವಾಲಿಕಾರ ಶಿಕ್ಷಕರು ಬಿಜಾಪುರ ಸೈನಿಕ ಶಾಲೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ಕೊಡುತ್ತಿದ್ದರು. ಅಲ್ಲಿ ಕೋಚಿಂಗ್ ತಗೆದುಕೊಳ್ಳುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆಯಲ್ಲಿ ಪ್ರವೇಶ ಪಡೆದು ಪ್ರಸಾದ ನಿಲಯದಲ್ಲಿದ್ದು ಕೋಚಿಂಗ್‌ಗೆ ಹೋಗುತ್ತಿದ್ದರು. ಸಾಯಂಕಾಲ 5-30 ರಿಂದ ರಾತ್ರಿ 10 ರ ವರೆಗೆ ಕೋಚಿಂಗ್ ತರಗತಿಗಳು ನಡೆಯುತ್ತಿದ್ದವು. ನಂತರ ಆ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಮಾಡುತ್ತಿರುವ ವೇಳೆಯಲ್ಲಿ ತರಗತಿಗೆ ಹಾಜರಾಗುವದು ರಾತ್ರಿ ಕೋಚಿಂಗ್ ಹೀಗೆ ವಾಲಿಕಾರ ಗುರುಗಳು ಇರುವ ವರೆಗೂ ನಡೆಯಿತು. ಈ ರೀತಿ ತರಬೇತಿ ಪಡೆದವರಲ್ಲಿ ಶ್ರೀ ವೀರೇಶ ಬಳ್ಳಾರಿ ಶ್ರೀ ಆರುಣ ಬೇವಿನಮರದ ಹಾಗೂ ಶ್ರೀ ವಿಜಯಮಹಾಂತೇಶ ದಾನಮ್ಮನವರ ಪ್ರಮುಖರು.
ಶ್ರೀ ಮಠದ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಶ್ರೀ ನಡುವಿನಮಠ ಇವರಿಂದ ಶ್ರೀ ಮಠಕ್ಕೆ ಹೊಂದಿಕೊಂಡಂತೆ ಇರುವ ಜಾಗೆಯನ್ನು ಖರೀದಿ ಮಾಡಿದಾಗ ಅಲ್ಲಿ ಇಟ್ಟಂಗಿ ಭಟ್ಟಿಗಳು ಇದ್ದವು ಒಂದು ದೊಡ್ಡ ಹೊಂಡ ಇತ್ತು ಉಳಿದ ಜಾಗೆಯಲ್ಲಿ ಮುಳ್ಳಿಕಂಟೆಯ ಗಿಡಗಳು ತುಂಬಿಕೊಂಡಿದ್ದವು. ಶಾಲೆಯ ಎಲ್ಲ ವಿದ್ಯಾರ್ಥಿಗಳು ಸೇರಿ ಅವುಗಳನ್ನೆಲ್ಲ ತಗೆದು ಸ್ವಚ್ಛ ಮಾಡಿ ಇಟ್ಟಂಗಿ ಭಟ್ಟಿಗಳಿದ್ದ ನೆಲವನ್ನು ಸಮ ಮಾಡಿ ಹೊಂಡವನ್ನು ಮುಚ್ಚಿ ಆಟದ ಮೈದಾನವನ್ನಾಗಿ ಪರಿವರ್ತಿಸಿದರು.
ಶ್ರೀ ಮಠದ ಮಾಲೀಕತ್ವದಲ್ಲಿದ್ದ ರಿ.ಸ. ನಂ. 66 ನ್ನು ಶ್ರೀ ತೊಂಡಿಹಾಳ ಅವರಿಗೆ 99 ವರ್ಷ ಭೂ ಬಾಡಿಗೆ ತರಿಕೆ ಕೊಡಲಾಗಿತ್ತು. ಸದರಿಯವರು ಅಲ್ಲಿ ಒಂದು ಜೀನ್ ನೆನೆಸುತ್ತಿದ್ದರು ಹಾಗೂ ಆರು ಗೋಡೌನ್ ಗಳನ್ನು ಕಟ್ಟಿ, ಅಬಕಾರಿ ಇಲಾಖೆಗೆ ಹಾಗೂ ಕೆಲವು ಖಾಸಗಿಯವರಿಗೆ ಮಾಲು ದಾಸ್ತಾನು ಮಾಡಲು ನೀಡಿದ್ದರು. ತರಗತಿಗಳನ್ನು ನೆಡೆಸಲು ಕೊಠಡಿಗಳ ಕೊರತೆ ಇದ್ದಿದ್ದರಿಂದ ಶ್ರೀ ತೊಂಡಿಹಾಳ ಅವರಿಂದ ಅವಧಿಗಿಂತ
ಮುಂಚೆಯೇ ಸದರಿ ಜಾಗೆ ಬಿಡಿಸಿಕೊಂಡು ಅಲ್ಲಿ 11 ತರಗತಿಗಳು ನಡೆಯುವಂತೆ ಗೋಡೌನ್‌ಗಳ ಕಟ್ಟಡವನ್ನು ಪರಿವರ್ತಿಸಲಾಯಿತು. ನಂತರ ಮಧ್ಯದ ಜಾಗೆಯಲ್ಲಿ ಶ್ರೀ ಶಿವಬಸವೇಶ್ವರ ಕಲ್ಯಾಣ ಮಂಟಪ ನಿರ್ಮಿಸಲಾಯಿತು.
ಪ್ರೌಢಶಾಲೆಗೆ ಪಕ್ಕಾ ಕಟ್ಟಡವಿರಲಿಲ್ಲ. ಇರುವ ಕಟ್ಟಡದಲ್ಲಿ ಗಾಳಿ, ಬೆಳಕಿನ ಕೊರತೆ ಇದ್ದಿದ್ದರಿಂದ, 2000ನೇ ಇಸವಿಯಲ್ಲಿ 3/3/2000 ದಿಂದ, ಶ್ರೀ ಶಿವಲಿಂಗ ಮಹಾಸ್ವಾಮಿಗಳ ಹುಟ್ಟುಹಬ್ಬ ದಂದು ಹೊಸ ಕಟ್ಟಡ ನಿರ್ಮಾಣ ಮಾಡಲು ಶಂಕುಸ್ಥಾಪನೆ ಮಾಡಿದರು. ಅವರು ಆಶೀರ್ವದಿಸಿದ ನೆಲಮಹಡಿ ಕಟ್ಟಡವನ್ನು ಒಂದು ವರ್ಷದಲ್ಲಿ ಅಂದರೆ 3/3/2001 ರಂದು ಅವರೇ ಉದ್ಘಾಟನೆ ನೆರವೇರಿಸಿದರು. ನಂತರ 3/3/2002 ರಂದು ಮೊದಲ ಹಂತದ ಕಟ್ಟಡವನ್ನು ಸಿದ್ಧಪಡಿಸಿ 3/3/2003 ರಂದು ಉದ್ಘಾಟಿಸಲಾಯಿತು. ಈ ಕಟ್ಟಡಕ್ಕೆ ಹಿಂದಿನ ಶಾಸಕರಾದ ಶ್ರೀ ಬಸವರಾಜ ಶಿವಣ್ಣನವರು ತಮ್ಮ ಶಾಸಕರ ಅನುದಾನದಲ್ಲಿ ಸಹಾಯಧನ ನೀಡಿದ್ದಲ್ಲದೆ ತಮ್ಮ ತಾಯಿಯವರ ಹೆಸರಿನಲ್ಲಿ ಒಂದು ಕೊಠಡಿ ದಾನಿಗಳಾದರು. ಈ ಕೆಳಗೆ ಕಾಣಿಸಿದ ಮಹನೀಯರು ದಾನಿಗಳ ಕಟ್ಟಡವು ಪೂರ್ಣಗೊಳ್ಳಲು ಧನ ಸಹಾಯ ಮಾಡಿ, ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವಲ್ಲಿ ಉದಾರತೆಯಿಂದ ನೆರವು ನೀಡಿ ಸಹಕಾರ ನೀಡಿದ್ದರು.
ಕೊಠಡಿ ದಾನಿಗಳ ವಿವರ
ಪರಮಪೂಜ್ಯ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳವರು, ಹುಕ್ಕೇರಿಮಠ, ಹಾವೇರಿ
ಶ್ರೀ ಬಸಯ್ಯ ಸೋಮಯ್ಯ ಸಾವಿರಮಠ, ಹಾವೇರಿ. ಶ್ರೀಮತಿ ಪುಟ್ಟವ್ವ ಕೋಂ ನೀಲಪ್ಪ ಶಿವಣ್ಣನವರ, ಅಗಡಿ ಶ್ರೀ ಶಿವಬಸಪ್ಪ ಮ. ರಾಜೇನವರ ಮತ್ತು ಮಕ್ಕಳು. ಶ್ರೀಮತಿ ಗೀತಾ ಕೋಂ ಪ್ರಭಾಕರರಾವ್ ಮಂಗಳೂರು, ಹಾವೇರಿ.
ಹುಕ್ಕೇರಿಮಠ ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳು, ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ ಹುಕ್ಕೇರಿಮಠ ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಹಾವೇರಿ.
ಶ್ರೀ ಎಚ್. ಹುಚ್ಚಪ್ಪ ಸಾ. ಮಾದಿಹಳ್ಳಿ ತಾ, ತುರುವೆಕೆರೆ. ಶ್ರೀಮತಿ ಪಾರ್ವತಿ ಕಾಶಪ್ಪ ಬೆಂಬಳಗಿ ಸಾ. ರಾಮದುರ್ಗ. ಶ್ರೀಮತಿ ಸಾವಂತ್ರವ್ವ ಕೋಂ ಶರಣಪ್ಪ ಹುರಳಿಕುಪ್ಪಿ ಸಾ. ಹಾವೇರಿ. ಶ್ರೀಮತಿ ಪಾರ್ವತಮ್ಮ ಕೋಂ ದೊಡ್ಡಬಸಪ್ಪ ಶಿರೂರ ಸಾ. ಬ್ಯಾಡಗಿ ವ ಹಾವೇರಿ.
ಶ್ರೀಮತಿ ರೇಖಾ ಕೋಂ ಶ್ರೀ ಸುರೇಶ ಮುರಡಣ್ಣನವರ ಶ್ರೀ ಶಿವಲಿಂಗೇಶ್ವರ ಕಂಪ್ಯೂಟರ್ಸ್ ಸಾ. ಹಾವೇರಿ. ¸ ಶ್ರೀ ಶಾಮಜಿ ಮತ್ತು ವಿನೋದ ಪಟೇಲ ಉಮಿಯಾ ವಿಜಯಾ ಸಾಮಿಲ್ ಸಾ. ಹಾವೇರಿ. ಶ್ರೀ ವೀರಣ್ಣ ಕೋರಿ ಮತ್ತು ರಾಜಶೇಖರ ಕೋರಿ ಮತ್ತು ಮಕ್ಕಳು, ಸಾ. ಹಾವೇರಿ. ಶ್ರೀಮತಿ ಪುಷ್ಪಮಾಲಾ ಕೋಂ ಶ್ರೀ ರಜನಿಕಾಂತ ಲೋಡಾಯಾ, ಸಾ. ಹಾವೇರಿ. ಪ್ರಯೋಗಾಲಯ ಪ್ರೌಢ ಶಾಲೆಯ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಪ್ರೌಢ ಶಾಲೆಯ ಹಿರಿಯ ವಿಧ್ಯಾರ್ಥಿಗಳ ಸಂಘ ದಿ ಕಾರ್ಡಮಮ್ ಮರ್ಚೆಂಟ್ಸ್ ಕೋ. ಆಫ್ ಬ್ಯಾಂಕ್ ಲಿ. ಹಾವೇರಿ
ಈ ಕಾರ್ಯದಲ್ಲಿ ಆಡಳಿತ ಮಂಡಳಿಯ ಮುಖ್ಯೋಪಾಧ್ಯಾಯರಾದ ಶ್ರೀ ಬಿ. ಬಸವರಾಜ, ಎಲ್ಲಾ ಶಿಕ್ಷಕ, ಶಿಕ್ಷಕೀಯರು ಪ್ರಮುಖ ಪಾತ್ರ ವಹಿಸಿದರು. ಅವರೆಲ್ಲರ ಅನುಪಮ ಅವಿರತ ಸೇವೆ ಶಾಲೆಯ ಏಳಿಗೆಗಾಗಿ ಸಲ್ಲಿಸಿದ ಗಣನೀಯ ಕೊಡುಗೆ ಸ್ಮರಣೀಯ, ಉಪಾಧ್ಯಾಯನೆಂದರೆ ಸಮಾಜದ ಸಾಂಸ್ಕೃತಿಕ ಚತುರ ತೋಟಗಾರ, ವಿದ್ಯಾರ್ಥಿಗಳೆಂಬ ಗಿಡಗಳಲ್ಲಿ ತನ್ನ ಪರಿಶ್ರಮದಿಂದ ಪ್ರಾಣಶಕ್ತಿಯನ್ನೇ ತುಂಬಿ ಸುಂದರ ಪುಷ್ಪಗಳು ಅರಳುವಂತೆ ಮಾಡುತ್ತಾನೆ. ಹುಕ್ಕೇರಿಮಠ ಶ್ರೀ ಶಿವಬಸವೇಶ್ವರ ಪ್ರೌಢಶಾಲೆಯ ನೆಲ ಅಂತಸ್ತು ಹಾಗೂ ಮೊದಲ ಅಂತಸ್ತು ಸೇರಿ ಒಟ್ಟು 16 ಕೊಠಡಿಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಿ, ದಾನಿಗಳಾಗಿ ನಗರದಲ್ಲಿ 2003 ರಲ್ಲಿ, ಈ ಕೆಳಕಂಡ ದಾನಿಗಳು ಮುಕ್ತವಾಗಿ ದಾನ ಮಾಡಿ ಶಾಲೆಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವಲ್ಲಿ ಉದಾರತೆ ಮೆರೆದು, ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಹಾಗೂ ಮೂಲ ಸೌಕರ್ಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಈ ಅನನ್ಯ ಸೇವೆಯನ್ನು ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಎಂದು ಮರೆಯಲಾರರು.
ಹುಕ್ಕೇರಿಮಠ ಶಿವಬಸವೇಶ್ವರ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳು ಹಾವೇರಿ ಜಿಲ್ಲೆಯಲ್ಲಿ ಪ್ರಸಿದ್ದ ಶಾಲೆಗಳಾಗಿದ್ದವು. ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದವು. ಇದಲ್ಲದೆ, ಶಿಕ್ಷಣ ಇಲಾಖೆಗೆ ಅಚ್ಚುಮೆಚ್ಚಿನ ಶಾಲೆಗಳಾಗಿದ್ದವು. ಇಲಾಖಾ ಪರೀಕ್ಷೆಗಳು ಮತ್ತು ಇತರ ಪರೀಕ್ಷೆಗಳಿಗಾಗಿ ಮೊದಲ ಕೇಂದ್ರಗಳಾಗಿದ್ದವು. ಕರ್ನಾಟಕ ಲೋಕಸೇವಾ ಆಯೋಗವು ಸರ್ಕಾರಿ ನೌಕರರಿಗಾಗಿ ಪ್ರತಿವರ್ಷ ನಡೆಸುವ ಇಲಾಖಾ ಪರೀಕ್ಷೆಗಳು 1997ರ ವರೆಗೆ ಜಿ.ಎಚ್. ಕಾಲೇಜಿನಲ್ಲಿ ನಡೆಯುತ್ತಿದ್ದವು. ನಂತರ 1998 ರಿಂದ ಸದರಿ ಕೇಂದ್ರವು ನಗರದಿಂದ ದೂರ ಎಂಬ ಕಾರಣದಿಂದ, ಹಾವೇರಿಯ ಡಿ.ಡಿ.ಪಿ.ಐ. ಸದರಿ ಪರೀಕ್ಷೆಗಳನ್ನು ಇಲ್ಲಿಯೇ ನಡೆಸಲು ಪ್ರಾರಂಭಿಸಿದರು.
ವರ್ಷಕ್ಕೆ ಎರಡು ಅಧಿವೇಶನಗಳು 11 ದಿನಗಳವರೆಗೆ ನಡೆಯುತ್ತಿದ್ದವು. ಇದಲ್ಲದೆ, ಕರ್ನಾಟಕ ಲೋಕಸೇವಾ ಆಯೋಗದಿಂದ ಪ್ರಥಮ
ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ನೇಮಕಾತಿಗೆ, ಪೊಲೀಸ್ ನೇಮಕಾತಿ ಲಿಖಿತ ಪರೀಕ್ಷೆ, ನವೋದಯ, ಮುರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗಳ ಪ್ರವೇಶ ಪರೀಕ್ಷೆಗಳು ಇಲ್ಲಿಯೇ ನಡೆಯುತ್ತಿದ್ದವು. ಪರೀಕ್ಷೆಗಳ ಕೇಂದ್ರ ಶಾಲೆಯಾಗಿತ್ತು
1973 ರಲ್ಲಿ ಶಾಲೆಗೆ ಸರ್ಕಾರದಿಂದ ಸಹಶಿಕ್ಷಣ (Co-education) ಶಾಲೆ ಎಂದೇ ಅನುಮತಿ ನೀಡಲಾಗಿತ್ತು. ಆದರೆ, ಹಾವೇರಿ ನಗರದಲ್ಲಿರುವ ಪ್ರೌಢ ಶಾಲೆಗಳಲ್ಲಿ, ನಗರಸಭಾ ಪ್ರೌಢಶಾಲೆಯಲ್ಲಿ ಬಾಲಕ, ಬಾಲಕಿಯರಿಗೆ ಪ್ರವೇಶವಿತ್ತು. ಆದರ್ಶ ಶಿಕ್ಷಣ ಸಮಿತಿಯ ಎಸ್.ಎಂ.ಎಸ್. ಪ್ರೌಢ ಶಾಲೆಯಲ್ಲಿ ಬಾಲಕಿಯರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿತ್ತು. ಹುಕ್ಕೇರಿಮಠ ಶಿವಬಸವೇಶ್ವರ ಪ್ರೌಢ ಶಾಲೆಯಲ್ಲಿ ಬಾಲಕರಿಗೆ ಪ್ರವೇಶ ನೀಡುತ್ತಿದ್ದು, ಇದು ಬಾಲಕರ ಪ್ರೌಢ ಶಾಲೆಯಾಗಿತ್ತು. ಕ್ರಮೇಣ, ಈ ಭಾಗದ ಪಾಲಕರು ಬಾಲಕಿಯರಿಗೆ ಪ್ರವೇಶ ನೀಡಬೇಕೆಂಬ ಬೇಡಿಕೆ ಇಟ್ಟರು. ಹೆಣ್ಣುಮಕ್ಕಳಿಗೆ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದರೆ ಅವರಲ್ಲಿ ಆತ್ಮಸ್ಥೆರ್ಯ, ಉತ್ತಮ ಸಂಸ್ಕಾರ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವುದೆಂಬ ದೂರದೃಷ್ಟಿಯಿಂದ "ಹೆಣ್ಣೆಂದು ಕಲಿತರೆ ಶಾಲೆಯೊಂದು ತೆರೆದಂತೆ"ಎಂಬ ಸಂಗತಿಯನ್ನು ಪರಿಗಣಿಸಿದ ಪರಮಪೂಜ್ಯ ಶ್ರೀ ಮ.ನಿ.ಪ್ರ ಶಿವಲಿಂಗ ಮಹಾಸ್ವಾಮಿಗಳು ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿ, 1987-88 ನೇ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರವೇಶ ನೀಡಿ ಮಹಿಳಾ ಸಬಲೀಕರಣದತ್ತ ಒಂದು ಹೆಜ್ಜೆ ಇಟ್ಟರು.
ವಿದ್ಯಾರ್ಥಿಗಳಲ್ಲಿ ಹಾಗೂ ಸಾಮಾನ್ಯ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ, ಮನೆ ಮನೆಗೆ ವಿಜ್ಞಾನದ ಅರಿವು ಮೂಡಿಸಿ, ಹೊಸ ಹೊಸ ಆವಿಷ್ಕಾರಗಳ ಬಗ್ಗೆ ತಿಳಿಸುವ ಅಖಿಲ ಭಾರತ ಮಟ್ಟದ ಭಾರತ ಜ್ಞಾನ ವಿಜ್ಞಾನ ಜಾಥಾ ದೇಶ ತುಂಬೆಲ್ಲ ಸಂಚರಿಸಿ 1985 ರಲ್ಲಿ ಹಾವೇರಿ ಜಿಲ್ಲೆಗೆ ಆಗಮಿಸಿದಾಗ, ನಗರದಲ್ಲಿ ಸಂಚರಿಸುವ ವ್ಯವಸ್ಥೆಯಲ್ಲದೆ ಮಾದರಿ ವಿಮಾನ ಹಾರಾಟ ಪ್ರದರ್ಶನ, ವಿಜ್ಞಾನ ವಸ್ತು ಪ್ರದರ್ಶನ, ವೈಜ್ಞಾನಿಕ ಉಪನ್ಯಾಸ, ಮೂಢನಂಬಿಕೆ ಕುರಿತು ಪ್ರತ್ಯಕ್ಷಿಕೆಗಳನ್ನು ಏರ್ಪಡಿಸಿ, ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಗಮನ ಸೆಳೆಯಿತು.
ಶ್ರೀ ಶಿವಬಸವೇಶ್ವರ ಪ್ರಸಾದ ನಿಲಯವೂ ಹುಕ್ಕೇರಿಮಠ ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಗಳ ಅವಿಭಾಜ್ಯ ಅಂಗವಾಗಿತ್ತು. ಪ್ರಸಾದ ನಿಲಯದಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುತ್ತಿದ್ದರು. ಅವರಿಗೆ ಉಟೋಪಚಾರದ ಜೊತೆಗೆ ಅಭ್ಯಾಸದ ಮೇಲ್ವಿಚಾರಣೆಯನ್ನು ಶಿಕ್ಷಕರೇ ಮಾಡುತ್ತಿದ್ದರು. ಬೆಳಿಗ್ಗೆ ಪ್ರಾರ್ಥನೆ, ಸಾಯಂಕಾಲದ ಪ್ರಾರ್ಥನೆ, ಊಟವನ್ನು ವಿತರಿಸುವ ಮತ್ತು ಬೆಳಿಗ್ಗೆ ಹಾಗೂ ರಾತ್ರಿ ಅಭ್ಯಾಸ ಮಾಡಿಸುವುದನ್ನು ಪಾಳೆಯ ಪ್ರಕಾರ ಮಾಡಿ, ವಿದ್ಯಾರ್ಥಿಗಳಿಗೆ ಅಭ್ಯಾಸದ ಜೊತೆಗೆ ಉತ್ತಮ ಸಂಸ್ಕಾರ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಎಲ್ಲಾ ಶಿಕ್ಷಕರು ಶ್ರಮಿಸಿ, ಸಾರ್ವಜನಿಕರ ಹಾಗೂ ಪಾಲಕರ ಅಭಿನಂದನೆಗೆ ಪಾತ್ರರಾಗಿದ್ದರು. ಮಕ್ಕಳಲ್ಲಿ ಸುಪ್ತವಾಗಿರುವ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಭಾವನೆಗಳನ್ನು ಜಾಗೃತಗೊಳಿಸಿ ಪ್ರೋತ್ಸಾಹಿಸುವ ದೃಷ್ಟಿಯಿಂದ, ಹಾಗೂ ಸುವಿಚಾರಗಳು ಮತ್ತು ಪ್ರತಿಭೆಯನ್ನು ಹೊರ ತರುವ ಉದ್ದೇಶದಿಂದ ಪ್ರಬಂಧ ಸ್ಪರ್ಧೆ, ವ್ಯಕ್ತಿತ್ವ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಹಾಡುಗಾರಿಕೆ, ಏಕಪಾತ್ರಾಭಿನಯ ಹಾಗೂ ಕಿರು ನಾಟಕಗಳನ್ನು ಏರ್ಪಡಿಸಿ, ಮಕ್ಕಳಲ್ಲಿ ಓದಿನ ಜೊತೆಗೆ ಸವಾರ್ಂಗೀಣ ಅಭಿವೃದ್ಧಿಯ ಕಡೆ ಗಮನ ನೀಡಲಾಗುತ್ತಿತ್ತು. ವೈಜ್ಞಾನ ಮನೋಭಾವ ಬೆಳೆಸಲು ಸುಸಜ್ಜಿತ ಪ್ರಯೋಗಾಲಯ, ಆಕಾಶ ವೀಕ್ಷಣೆಗೆ ದೂರದರ್ಶಕ ಯಂತ್ರ, ವಿಜ್ಞಾನ ಘಟಕ ಸ್ಥಾಪಿಸಿ, ತನ್ಮೂಲಕ ವಿದ್ಯಾರ್ಥಿಗಳು ಸೃಜನಶೀಲರಾಗಿ ಬೆಳೆಯಲು ಸಹಕರಿಸಲಾಗುತ್ತಿತ್ತು. ಶಾಲೆಗಳ ಆವರಣದಲ್ಲಿ ಗಿಡಮರಗಳನ್ನು ಬೆಳೆಸಿ ಪರಿಸರ ಪ್ರಜ್ಞೆ ಮೂಡಿಸುವುದು ಹಾಗೂ ತರಗತಿಗಳಲ್ಲಿ, ಬಯಲಿನಲ್ಲಿ ರೇಡಿಯೋ ಪಾಠ ಕೇಳಿಸುವ ಕಾರ್ಯಗಳು ವೇಳಾಪಟ್ಟಿಯಂತೆ ನಡೆಯುತ್ತಿದ್ದವು. ಪಠ್ಯ ಚಟುವಟಿಕೆಗಳ ಜೊತೆ ಪಠ್ಯಪುಸ್ತಕ ಚಟುವಟಿಕೆಗಳನ್ನು ಸಮಾನ ಅವಕಾಶ ಕಲ್ಪಿಸಲಾಗುತ್ತಿದ್ದುದು ವಿಶೇಷ.
ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದಿಂದ 1985 ರಲ್ಲಿ ಶಾರದಾ ಸಂಗೀತ ಶಾಲೆಯನ್ನು ಪ್ರಾರಂಭಿಸಲಾಯಿತು. ಪ್ರಾರಂಭದಲ್ಲಿ ಹನುಮಂತ ಸಿಂಗ್ ಹಾನಗಲ್, ನಂತರ ನಾಗಲಿಂಗ ಗವಾಯಿಗಳು ವಸ್ತ್ರದಮಠ, ಶ್ರೀ ಶಿವಕುಮಾರ್ ಹಿರಿಮಠ, ಶ್ರೀ ಸೋಮಶೇಖರ್ ಬುಡಗಿರ ಸಂಗೀತ ಶಿಕ್ಷಕರಾಗಿ ಮತ್ತು ತಬಲಾ ಶಿಕ್ಷಕರಾಗಿ ಶ್ರೀ ನೀಲಕಂಠಪ್ಪ ಬಡಿಗೇರ ಅವರುಗಳು ಉತ್ತಮ ಸೇವೆ ಸಲ್ಲಿಸಿದರು. ನಂತರ ಸಂಗೀತ ಶಿಕ್ಷಕರ ಅಲಭ್ಯತೆಯಿಂದ ಶಾಲೆ ಬರಿದಾಯಿತು.
1986-87 ನೇ ಶೈಕ್ಷಣಿಕ ವರ್ಷದಲ್ಲಿ ಶ್ರೀ ಶಿವಲಿಂಗೇಶ್ವರ ಶಿಶು ವಿಹಾರವನ್ನು ಪ್ರಾರಂಭಿಸಲಾಯಿತು. ಅಲ್ಲಿ ಆಟ, ಪಾಠ, ಕಲಿಕಲಿಯೊಂದಿಗೆ ಮಕ್ಕಳನ್ನು ತಯಾರು ಮಾಡಿ, ಪ್ರಾಥಮಿಕ ಒಂದನೇ ತರಗತಿ ವ್ಯವಸ್ಥೆ ನಿರಂತರವಾಗಿ ನಡೆದು ಬಂದಿದೆ. ಇದರಿಂದ ಶಾಲೆಯ ಶೈಕ್ಷಣಿಕ ಗುಣಮಟ್ಟವು ಉತ್ತಮವಾಗಿದೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.
ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ,
ಪರಮಪೂಜ್ಯ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳಿಗೆ 75 ವರ್ಷಗಳಾದ ಸಂದರ್ಭದಲ್ಲಿ, ಅವರ ವಜ್ರ ಮಹೋತ್ಸವ ಸಮಾರಂಭವನ್ನು 1992ರ ಮಾರ್ಚ್ ತಿಂಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಅದರ ಸವಿನೆನೆಗಾಗಿ, ಮಹಿಳೆಯರಿಗಾಗಿ ಮಹಿಳಾ ಕಾಲೇಜನ್ನು ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದಲ್ಲಿ ಪ್ರಾರಂಭಿಸಲು ಪೂಜ್ಯರು ಸಲಹೆ ನೀಡಿದರು. ಶಿಕ್ಷಣ, ""ಹೆಣ್ಣು ಮಕ್ಕಳನ್ನು ಸಂಸ್ಕಾರಯುತವಾಗಿ, ವಿಚಾರವಾದಿಗಳಾಗಿ ಬೆಳೆಯಲು ಸಹಾಯ ಮಾಡುತ್ತದೆ" ಹಾಗು ಕಲಿತ ಹೆಣ್ಣು ಕುಲಕ್ಕೆ ಗೌರವ, ಹೆಣ್ಣೆಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನುಡಿಯಂತೆ, ಹಾವೇರಿ ನಗರದಲ್ಲಿ ಒಂದು ಹೆಣ್ಣು ಮಕ್ಕಳ ಕಾಲೇಜನ್ನು ಪ್ರಾರಂಭಿಸಿದರೆ ಅನುಕೂಲವಾಗಬಹುದೆಂದು ಉದ್ದೇಶದಿಂದ, ಹಾವೇರಿ ನಗರ ಹಾಗೂ ಸುತ್ತಮುತ್ತಲ ಗ್ರಾಮದ ಮಹಿಳೆಯರು ಪದವಿ ಶಿಕ್ಷಣ ಪಡೆಯಲು, ಹಾವೇರಿಯಿಂದ 3 ಕಿ.ಮಿ. ದೂರವಿರುವ ಜಿ.ಎಚ್ ಕಾಲೇಜಿಗೆ ಹೋಗಬೇಕಾಗುತ್ತಿತ್ತು. ಇದರಿಂದ ಪಿಯುಸಿ ಆದ ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದರು. ಇದನ್ನು ಮನಗಂಡ ಮಹಾಸ್ವಾಮಿಗಳು ವಜ್ರ ಮಹೋತ್ಸವದಲ್ಲಿ ಬೆಳ್ಳಿ ತುಲಾಭಾರದಿಂದ ಬಂದ ಹಣವನ್ನು ಆಶೀರ್ವದಿಸಿದ ಪರಿಣಾಮವಾಗಿ,
ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯವನ್ನು 1992 ರಿಂದ ಶ್ರೀ ಹುಕ್ಕೇರಿಮಠದ ಆವರಣದಲ್ಲಿ ಪ್ರಾರಂಭಿಸಲಾಯಿತು.
1992 ರಲ್ಲಿ ಕೇವಲ 48 ವಿದ್ಯಾರ್ಥಿನಿಯರಿಂದ ಪ್ರಾರಂಭವಾಗಿ, 2004-05 ರಲ್ಲಿ 450 ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದರು. ಹಾವೇರಿ ನಗರದಲ್ಲಿಯೇ ಸರ್ಕಾರಿ ಮಹಿಳಾ ಕಾಲೇಜು ಪ್ರಾರಂಭವಾಗಿದ್ದರಿಂದ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆಯಾಗಿ, ಈಗ 143 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ಹಲವಾರು ಬ್ಯಾಂಕುಗಳನ್ನು ಪಡೆದು ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ. ವಾಣಿಜ್ಯ ಶಿಕ್ಷಣದ ಅವಶ್ಯಕತೆ ವಿದ್ಯಾರ್ಥಿನಿಯರಿಗೆ ಇರುವುದನ್ನರಿತು, 2014-15ನೇ ಸಾಲಿನಲ್ಲಿ ಬಿ.ಕಾಂ. ತರಗತಿಗಳನ್ನು ಪ್ರಾರಂಭಿಸಲಾಯಿತು. ಈಗ ಬಿಕಾಂ ವಿಭಾಗದಲ್ಲಿ 75 ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ. 1996-97 ನೇ ಸಾಲಿನಲ್ಲಿ ಬಾಲಕಿಯರ ಪದವಿಪೂರ್ವ ಕಾಲೇಜನ್ನು ಪ್ರಾರಂಭಿಸಲಾಯಿತು. ಅಲ್ಲಿ ಈಗ 85 ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಶ್ರೀ ರಾಚೋಟೇಶ್ವರ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯ, ಇಂದಿನ ದಿನಮಾನದಲ್ಲಿ ವಿಜ್ಞಾನ ಶಿಕ್ಷಣದ ನಂತರದ ಸ್ಥಾನ ವಾಣಿಜ್ಯ ಶಿಕ್ಷಣಕ್ಕಿದೆ ಎಂದರೆ ತಪ್ಪಾಗಲಾರದು ಇದನ್ನರಿತ ಆಡಳಿತ ಮಂಡಳಿಯವರು 2014 ರಲ್ಲಿ ಶ್ರೀ ರಾಚೋಟೇಶ್ವರ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯವನ್ನು ಪ್ರಾರಂಭಿಸಿದರು. ಈಗ ಅಲ್ಲಿ 94 ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ.
ಶ್ರೀ ಶಿವಲಿಂಗೇಶ್ವರ ಡಿ.ಇಡಿ ಕಾಲೇಜು ಉತ್ತಮ ಶಿಕ್ಷಕರನ್ನು ತಯಾರು ಮಾಡಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ, ಶ್ರೀ ಶಿವಲಿಂಗೇಶ್ವರ ಶಿಕ್ಷಕರ ತರಬೇತಿ ಮಹಾವಿದ್ಯಾಲಯವನ್ನು 2005 ರಲ್ಲಿ ಪ್ರಾರಂಭಿಸಿದರು. 10 ವರ್ಷಗಳ ವರೆಗೆ ಯಶಸ್ವಿಯಾಗಿ ನಡೆದು, ಸರ್ಕಾರದಿಂದ ಶಿಕ್ಷಕರ ನೇಮಕಾತಿ ಆಗದೇ ಇರುವುದು ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಬಿ.ಇಡಿ. ತರಬೇತಿ ಪಡೆದವರನ್ನು ನೇಮಕ ಮಾಡಿಕೊಳ್ಳುವುದು ಮುಂತಾದ ಕಾರಣಗಳಿಂದ ಕಾಲೇಜಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯದೇ ಇದ್ದುದರಿಂದ, ಕಾಲೇಜನ್ನು 2015 ರಲ್ಲಿ ಮುಚ್ಚಬೇಕಾಯಿತು.
ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠ
ಶ್ರೀ ತಿವಲಿಂಗೇಶ್ವರ ವಿದ್ಯಾಪೀಠವು ಮಠಾಧ್ಯಕ್ಷರಾಗಿದ್ದ ಪರಮಪೂಜ್ಯ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಮಿಗಳವರ ಗೌರವ ಅಧ್ಯಕ್ಷತೆಯಲ್ಲಿ 1985 ರಲ್ಲಿ ಶ್ರೀಮಠದಲ್ಲಿ ಪ್ರಾರಂಭವಾಯಿತು. ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದ ಸಂಸ್ಥಾಪಕ ಚೇರ್ಮನ್ನರಾದ ಶ್ರೀ ಷಡಕ್ಷರಪ್ಪ ಸಿದ್ರಾಮಪ್ಪ ಮುಷ್ಠಿ ಇವರು 1985 ರಿಂದ 2011 ರ ವರೆಗೆ ಸುವ್ಯವಸ್ಥಿತವಾಗಿ ಆಡಳಿತ ನಡೆಸಿ, ಶಾಲಾ ಕಾಲೇಜುಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಿರುವುದಲ್ಲದೇ ಆರ್ಥಿಕವಾಗಿ ಸಬಲಗೊಳಿಸಿ ಭದ್ರ ಬುನಾದಿ ಹಾಕಿದರು. ನಂತರ ಶ್ರೀ ಪಿ.ಡಿ ಶಿರೂರ ಅವರು ಚೇರಮನ್ನರಾಗಿ ಅತ್ಯಂತ ಕ್ರಿಯಾಶೀಲತೆಯಿಂದ ಆಡಳಿತ ನಿರ್ವಹಣೆ ಮಾಡಿದ್ದಲ್ಲದೆ ಶಾಲಾ ಕಾಲೇಜುಗಳಿಗೆ ವೇಗವರ್ಧಕ ನೀಡಿ ಜಿಲ್ಲಾದ್ಯಂತ ಹೆಸರುವಾಸಿಯಾಗಲು ಅನೇಕ ವಿಧಾಯಕ ಕಾರ್ಯಕ್ರಮ ಕೈಗೊಂಡರು. 2015 ರಿಂದ ಚೇರಮನ್ನರಾದ ಶ್ರೀ ಶಿವಬಸಪ್ಪ ಎಸ್. ಮುಷ್ಠಿ ಅವರು ತಮ್ಮ ಸರಳತೆ ಹಾಗೂ ಸಜ್ಜನಿಕೆಯಿಂದ ಎಲ್ಲರ ಗೌರವಾದರಗಳಿಗೆ ಪಾತ್ರರಾಗಿ ಉತ್ತಮ ಆಡಳಿತ ನೀಡುತ್ತಾ ಬಂದಿರುವುದು ಅಭಿಮಾನದ ಸಂಗತಿ.
ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದ ಗೌರವಾಧ್ಯಕ್ಷರಾಗಿರುವ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀಮ.ನಿ.ಪ್ರ ಸದಾಶಿವ ಮಹಾಸ್ವಾಮಿಗಳು. ಹುಕ್ಕೇರಿ ಮಠದ ನಿರಂಜನ ಪೀಠವನ್ನು 23-5-2010 ರಂದು ಅಲಂಕರಿಸಿದ ನಂತರ ಶಿಕ್ಷಣ ಸಂಸ್ಥೆಗಳ ಸರ್ವತೋಮುಖ ಅಭಿವೃದ್ಧಿಗೆ ಗಮನಹರಿಸಿ, ಸುವ್ಯವಸ್ಥಿತ ರೀತಿಯಲ್ಲಿ ನಡೆಯುವಂತೆ ಹಾಗೂ ಗುಣಮಟ್ಟದ ಶಿಕ್ಷಣ ನೀಡುವಂತೆ ನೋಡಿಕೊಳ್ಳುತ್ತಿದ್ದಾರೆ. ಪರಮಪೂಜ್ಯ ಶ್ರೀ ಮ.ನಿ.ಪ್ರ ಶಿವಲಿಂಗ ಮಹಾಸ್ವಾಮಿಗಳವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಾ, ಭಕ್ತರಿಂದ ಕಾಯಂ ಠೇವಣಿಗಳನ್ನ ಸಂಗ್ರಹಿಸಿಟ್ಟು ಅವುಗಳಿಂದ ಬಂದ ಬಡ್ಡಿಯ ಹಣದಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಾ, ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ, ನೋಟ್ ಪುಸ್ತಕ, ಲೇಖನ ಸಾಮಗ್ರಿಗಳನ್ನು ನೀಡುತ್ತಾ ಬಂದಿರುವದು ಅವರ ಶೈಕ್ಷಣಿಕ ಕಾಳಜಿಗೆ ಒಂದು ಉತ್ತಮ ಉದಾಹರಣೆ. ಶಾಲೆಯಲ್ಲಿ ಪಠ್ಯ ಚಟುವಟಿಕೆಗಳ ಜೊತೆ, ಪಠ್ಯ ಪೂರಕ ಚಟುವಟಿಕೆಗಳಾದ ಭಾಷಣ ಸ್ಪರ್ಧೆ, ಚರ್ಚಾಕೂಟ, ರಸಪ್ರಶ್ನೆ, ಕಾವ್ಯಗಾಯನ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಉತ್ತಮ ವಾಚನಾಲಯ ಹಾಗೂ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯವಿದೆ. ಇತಿಹಾಸ ಸಂಘ, ಇಕೋ ಕ್ಲಬ್, ವಿಜ್ಞಾನ ಸಂಘಗಳ ಮೂಲಕ ವಿದ್ಯಾರ್ಥಿಗಳ ಸವಾರ್ಂಗೀಣ ಉನ್ನತಿಗೆ, ವಿಕಾಸಕ್ಕೆ ಅನುಕೂಲ ಕಲ್ಪಿಸಲಾಗಿದೆ.
ಹುಕ್ಕೇರಿಮಠದ ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳು 51 ವರ್ಷ ಸಾರ್ಥಕ ಸೇವೆ ಪೂರೈಸಿ, ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ, ಮಾರ್ಗದರ್ಶನ ಮಾಡಿ, ಶಿಸ್ತು ಹಾಗೂ ನೈತಿಕ ಮೌಲ್ಯಗಳನ್ನು ಕಲಿಸಿ, ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ಎರಡು ಶಾಲೆಗಳು ಬೆಳೆದು ಬಂದು ಐದು ದಶಕಗಳನ್ನು ಯಶಸ್ವಿಯಾಗಿ ಪೂರೈಸಲು, ಪರಮ ತಪಸ್ವಿಗಳಾದ ಪರಮಪೂಜ್ಯ ಶ್ರೀ ಮ.ನಿ.ಪ್ರ ಶಿವಬಸವ ಮಹಾಶಿವಯೋಗಿಗಳವರ ಸಂಸ್ಥಾಪಕರಾದ ಪರಮಪೂಜ್ಯ ಶ್ರೀ ಮ.ನಿ.ಪ್ರ ಶಿವಲಿಂಗ ಮಹಾಶಿವಯೋಗಿಗಳವರ ಅವರ ಆಶೀರ್ವಾದ ಹಾಗೂ ಪ್ರಸ್ತುತ ಮತಾಧ್ಯಕ್ಷರಾದ ಶ್ರೀ ಮ.ನಿ.ಪ್ರ ಸದಾಶಿವ ಮಹಾಸ್ವಾಮಿಗಳವರ ಕರುಣಾಪೂರಿತ ಅಂತಃಕರಣದ ಆಶೀರ್ವಾದ, ಮಾರ್ಗದರ್ಶನ, ಆಡಳಿತ ಮಂಡಳಿಯವರ ದೂರದೃಷ್ಟಿ, ತ್ಯಾಗ ಮತ್ತು ಸೇವೆ, ಪಾಲಕರ ಸಹಾಯ, ಸಹಕಾರ, ನಿಷ್ಠಾವಂತ ಶಿಕ್ಷಕರ ಜ್ಞಾನದಾಸೋಹ ಮತ್ತು ವಿದ್ಯಾರ್ಥಿಗಳ ಪರಿಶ್ರಮದ ಫಲ ಎಂದು ಹೆಮ್ಮೆಯಿಂದ ಹೇಳ ಬಯಸುತ್ತೇನೆ.
Lorem ipsum dolor sit amet, consectetur adipisicing elit. Deleniti aliquid vero harum rerum voluptates, ab, ullam.
Espen Brunberg
Web Developer
Lorem ipsum dolor sit amet, consectetur adipisicing elit. Reiciendis voluptate modi sunt placeat in vel illo dolorem, atque maxime voluptates optio fugit iure cum ipsa quo quaerat! Veritatis, modi. Laudantium provident deleniti earum voluptas delectus, labore dolor dolorem amet expedita.
Kaite Stricker
Designer
Lorem ipsum dolor sit amet, consectetur adipisicing elit. Reiciendis voluptate modi sunt placeat in vel illo dolorem, atque maxime voluptates optio fugit iure cum ipsa quo quaerat! Veritatis, modi. Laudantium provident deleniti earum voluptas delectus, labore dolor dolorem amet expedita.
Adam Smith
Web Developer
Lorem ipsum dolor sit amet, consectetur adipisicing elit. Reiciendis voluptate modi sunt placeat in vel illo dolorem, atque maxime voluptates optio fugit iure cum ipsa quo quaerat! Veritatis, modi. Laudantium provident deleniti earum voluptas delectus, labore dolor dolorem amet expedita.