ಶ್ರೀ ಹುಕ್ಕೇರಿಮಠ
ಹಾವೇರಿ.

Let's begin

About Math
ಶ್ರೀ ಹುಕ್ಕೇರಿಮಠದ ಪರಂಪರೆ

ಹಾವೇರಿ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಹುಕ್ಕೇರಿ ಮಠವು ಆಧ್ಯಾತ್ಮಿಕತೆ ಮತ್ತು ಪ್ರಶಾಂತತೆಯ ಪರಿಪೂರ್ಣ ಮಿಶ್ರಣವನ್ನು ನೀಡುವ ಶಾಂತ ತಾಣವಾಗಿದೆ. ಪ್ರಾಚೀನ ಶ್ರೀ ಸಿದ್ಧೇಶ್ವರ ಸ್ವಾಮಿ ದೇವಾಲಯದ ಎದುರಿನಲ್ಲಿರುವ ಈ ಮಠವು ಶಾಂತಿ ಮತ್ತು ದೈವಿಕ ಶಕ್ತಿಯನ್ನು ಬಯಸುವವರು ಭೇಟಿ ನೀಡಲೇಬೇಕಾದ ತಾಣವಾಗಿದೆ.

ಹುಕ್ಕೇರಿಮಠದ ಇತಿಹಾಸ

ಹಾವೇರಿ ಹುಕ್ಕೇರಿಮಠದ ಜಾತ್ರಾ ಮಹೋತ್ಸವ

Institutions

Sri. Hukkerimath Shivabasaveshwar Higher Primary Schoool
ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠ

ಶ್ರೀ ತಿವಲಿಂಗೇಶ್ವರ ವಿದ್ಯಾಪೀಠವು ಮಠಾಧ್ಯಕ್ಷರಾಗಿದ್ದ ಪರಮಪೂಜ್ಯ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಮಿಗಳವರ ಗೌರವ ಅಧ್ಯಕ್ಷತೆಯಲ್ಲಿ 1985 ರಲ್ಲಿ ಶ್ರೀಮಠದಲ್ಲಿ ಪ್ರಾರಂಭವಾಯಿತು. ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದ ಸಂಸ್ಥಾಪಕ ಚೇರ್ಮನ್ನರಾದ ಶ್ರೀ ಷಡಕ್ಷರಪ್ಪ ಸಿದ್ರಾಮಪ್ಪ ಮುಷ್ಠಿ ಇವರು 1985 ರಿಂದ 2011 ರ ವರೆಗೆ ಸುವ್ಯವಸ್ಥಿತವಾಗಿ ಆಡಳಿತ ನಡೆಸಿ, ಶಾಲಾ ಕಾಲೇಜುಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಿರುವುದಲ್ಲದೇ ಆರ್ಥಿಕವಾಗಿ ಸಬಲಗೊಳಿಸಿ ಭದ್ರ ಬುನಾದಿ ಹಾಕಿದರು. ನಂತರ ಶ್ರೀ ಪಿ.ಡಿ ಶಿರೂರ ಅವರು ಚೇರಮನ್ನರಾಗಿ ಅತ್ಯಂತ ಕ್ರಿಯಾಶೀಲತೆಯಿಂದ ಆಡಳಿತ ನಿರ್ವಹಣೆ ಮಾಡಿದ್ದಲ್ಲದೆ ಶಾಲಾ ಕಾಲೇಜುಗಳಿಗೆ ವೇಗವರ್ಧಕ ನೀಡಿ ಜಿಲ್ಲಾದ್ಯಂತ ಹೆಸರುವಾಸಿಯಾಗಲು ಅನೇಕ ವಿಧಾಯಕ ಕಾರ್ಯಕ್ರಮ ಕೈಗೊಂಡರು. 2015 ರಿಂದ ಚೇರಮನ್ನರಾದ ಶ್ರೀ ಶಿವಬಸಪ್ಪ ಎಸ್. ಮುಷ್ಠಿ ಅವರು ತಮ್ಮ ಸರಳತೆ ಹಾಗೂ ಸಜ್ಜನಿಕೆಯಿಂದ ಎಲ್ಲರ ಗೌರವಾದರಗಳಿಗೆ ಪಾತ್ರರಾಗಿ ಉತ್ತಮ ಆಡಳಿತ ನೀಡುತ್ತಾ ಬಂದಿರುವುದು ಅಭಿಮಾನದ ಸಂಗತಿ.


Know more about us

Sri. Shivalingeshwara Womens College Hukkerimath, Haveri
ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ,

Sri. Shivalingeshwar Degree College for Women, is located in Haveri, Karnataka. Established in 1992, it is a private institute. Sri. Shivalingeshwar Degree College for Women provides 2 UG courses in several specialisations. Theses programmes are offered in both Full Time mode. B.Com and B.A. are some of the courses offered at Sri. Shivalingeshwar Degree College for Women. Some of the streams in which these courses are offered include Accounting & Commerce and Humanities & Social Sciences. Sri. Shivalingeshwar Degree College for Women has a student intake of 290 for all the courses. Sri. Shivalingeshwar Degree College for Women offers all the infrastructural facilities to students.


Know more about us

Hukkerimath Boys Hostel, Haveri

  • - ಶ್ರೀ ಶಿವಲಿಂಗೇಶ್ವರ ದಾಸೋಹ ಮಂದಿರ - 365 ದಿನಾ
  • - ಸಾಮೂಹಿಕ ವಿವಾಹ ನೆರವೇರಿಸುವ ಆದರ್ಶಪ್ರಾಯ ಕಾರ್ಯಕ್ರಮ ಶ್ರೀಮಠದಲ್ಲಿ ಪ್ರತಿವರ್ಷ ನಡೆಯುತ್ತ ಬಂದಿದೆ.
  • - ರೈತರಿಗೆ ಅನುಕೂಲವಾಗಲೆಂದು 1971 ರಲ್ಲಿ ಶ್ರೀ ಶಿವಬಸವ ಜಾನುವಾರು ಜಾತ್ರೆಯನ್ನು ಪ್ರಾರಂಭಿಸಲಾಯಿತು.
  • - ಶ್ರೀ ಹುಕ್ಕೇರಿಮಠದಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರಾವಣ ಮಾಸ, ಬಸವಜಯಂತಿ ಹಾಗೂ ಪೂಜ್ಯರ ಪುಣ್ಯ ಸ್ಮರಣೋತ್ಸವಗಳ ಸಂದರ್ಭದಲ್ಲಿ ಜರುಗುತ್ತಿದ
  • - ಶ್ರೀ ಹುಕ್ಕೇರಿಮಠ ಶಿವಬಸವೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ನಡೆಯುತಿದೆ
  • - ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ,
  • - ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದಿಂದ 1985 ರಲ್ಲಿ ಶಾರದಾ ಸಂಗೀತ ಶಾಲೆಯನ್ನು ಪ್ರಾರಂಭಿಸಲಾಯಿತು.

Know more about us

ಬನ್ನಿ ಅಕ್ಷರ ಜೋಳಿಗೆಯ ಈ ಅಭಿಯಾನಕ್ಕೆ ಕೈ ಜೋಡಿಸಿ

ಅನ್ನ, ಅಕ್ಷರ, ಅರಿವು, ಆರೋಗ್ಯ, ಆಧ್ಯಾತ್ಮ ದಾಸೋಹದ ಕ್ಷೇತ್ರ ಶ್ರೀ ಹುಕ್ಕೇರಿಮಠ. ತಾವು ಪೂಜಿಸುವ ದೇವರ ಮಂದಿರದಲ್ಲಿ ದೀಪ ಹಚ್ಚುವುದಕ್ಕಿಂತ, ದೀಪವೇ ಇಲ್ಲದ ಗುಡಿಸಿಲಿನ ಮಕ್ಕಳ ಎದೆಯಲ್ಲಿ ಅಕ್ಷರದೀಪ ಹಚ್ಚುವ ಕಾರ್ಯವೇ ಪೂಜೆಯೆಂದು ಅರಿತವರು ಶ್ರೀಮಠದ ಪೂಜ್ಯರು. ಈ ನಾಡಿನ ಮಕ್ಕಳ ಏಳ್ಗೆಗಾಗಿ ಶಿಕ್ಷಣ ಸಂಸ್ಥೆ ಸ್ಥಾಪನೆಯ ಜೊತೆಗೆ ಮುಖ್ಯವಾಗಿ ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳ ವಿದ್ಯಾವಿಕಾಸಕ್ಕೆ ಹುಕ್ಕೇರಿಮಠ ಆಸರೆಯ ತಾಣವಾಗುತ್ತಿದೆ.

ನಿಮ್ಮ ಹಣೆಯ ಬೆವರ ಹನಿಯಿಂದ ಬಂದ ಹಣ ಸಾವಿರಾರು ಮಕ್ಕಳ ಹಣೆಯ ಬರಹವನ್ನೇ ಬದಲಿಸಲಿದೆ. ತಮ್ಮ ಶ್ರಮದ ಸಂಪತ್ತನ್ನು ಶ್ರೀ ಹುಕ್ಕೇರಿಮಠದ "ಅಕ್ಷರ ಜೋಳಿಗೆಯ" ಸತ್‌ಕಾರ್ಯಕ್ಕೆ ವಿನಿಯೋಗಿಸುವ ತಮ್ಮ ಕಾರ್ಯ ಸರ್ವರಿಗೂ ಪ್ರೇರಣಾದಾಯಕವಾಗಲಿದೆ.

Donation